ಶಾಲೆಯೋ ಅಥವಾ ಮಸಾಜ್ ಪಾರ್ಲರ್ ....!!!! ಶಾಲೆಯಲ್ಲಿ ಟೀಚರ್ ,ಸ್ಟೂಡೆಂಟ್ ಮಸಾಜ್ ..!!

ಶುಕ್ರವಾರ, 29 ಜುಲೈ 2022 (16:15 IST)
ವಿದ್ಯಾರ್ಥಿಯೊರ್ವನಿಂದ ಶಾಲೆಯಲ್ಲೇ ಮಸಾಜ್​ ಮಾಡಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಈ ಘಟನೆ ಈ ವಾರದ ಆರಂಭದಲ್ಲಿ ಉತ್ತರ ಪ್ರದೇಶದ ಹರ್ದೋಯ್​ನಲ್ಲಿರುವ ಪೊಖಾರಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ..
 
ಶಿಕ್ಷಕಿಯೊಬ್ಬಳು ಕುರ್ಚಿಯ ಮೇಲೆ ಕುಳಿತಿದ್ದಾಳೆ. ಓರ್ವ ವಿದ್ಯಾರ್ಥಿ ಶಿಕ್ಷಕಿ ಪಕ್ಕದಲ್ಲಿ ನಿಂತು ಮಸಾಜ್​ ಮಾಡುತ್ತಿದ್ದ. ಉಳಿದ ವಿದ್ಯಾರ್ಥಿಗಳು ತರಗತಿ ಒಳಗೆ ಓಡಾಡುತ್ತಿದ್ದು, ಅವರ ಮೇಲೆ ಶಿಕ್ಷಕಿ ಕೋಪಗೊಂಡಿರುವುದು ದೃಶ್ಯದಲ್ಲಿದೆ.
 
ಮಾನತುಗೊಂಡಿರುವ ಊರ್ಮಿಳಾ ಸಿಂಗ್ ಎಂಬ ಶಿಕ್ಷಕಿ ಪೋಖಾರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೃಶ್ಯಾವಳಿಗಳು ಹೊರಬಂದ ನಂತರ, ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ವಿಪಿ ಸಿಂಗ್ ಅವರು ಘಟನೆಯ ಬಗ್ಗೆ ತನಿಖೆ ನಡೆಸಿ ಸೂಕ್ತ ವರದಿಯನ್ನು ಸಲ್ಲಿಸುವಂತೆ ಬ್ಲಾಕ್ ಶಿಕ್ಷಣಾಧಿಕಾರಿಯನ್ನು ಕೇಳಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ