ಕಾಂಗ್ರೆಸ್ ನ ಪ್ರಭಾವಿ ಸಚಿವರಿಂದಲೇ ಟಿಕೆಟಿಗಾಗಿ ಭಾರಿ ಪೈಪೋಟಿ; ಇದೆಂಥಾ ಫ್ಲೇಕ್ಸ್ ರಾಜಕಾರಣ

ಮಂಗಳವಾರ, 26 ಡಿಸೆಂಬರ್ 2017 (11:46 IST)
ಬೆಂಗಳೂರು: ಕಾಂಗ್ರೆಸ್ ನ ಪ್ರಭಾವಿ ಸಚಿವರಿಂದಲೇ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದಿಂದ  ಟಿಕೆಟಿಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ.


ಹಿರಿಯ ಸಚಿವರಾದ ಹೆಚ್.ಸಿ. ಮಹದೇವಪ್ಪ ಅವರು ಟಿಕೆಟಗಾಗಿ ಪಿ. ರಮೇಶ್ ಅವರ ಜೊತೆ ಭಾರಿ ಪೈಪೋಟಿ ಮಾಡುತ್ತಿದ್ದಾರೆ. ಹೆಚ್.ಸಿ. ಮಹದೇವಪ್ಪ ಅವರು ಹೆಸರು ಘೋಷಣೆಗೂ ಮುನ್ನವೇ ತಾನೆ ಮುಂದಿನ ಅಭ್ಯರ್ಥಿ ಎಂದು ಬಿಂಬಿಸುವ ಫ್ಲೆಕ್ಸ್ ಗಳನ್ನು ಬೀದಿ ಬೀದಿಯಲ್ಲಿ ಅಳವಡಿಸಿದ್ದಾರೆ.  ಕ್ರಿಸ್ ಮಸ್ ಹಾಗು ಹೊಸ ವರ್ಷದ ಶುಭಾಶಯ ಕೋರಿ ತಮ್ಮ ಭಾವಚಿತ್ರದ ಜೊತೆ ಹೆಸರನ್ನು ಸೇರಿಸಿ 2018 ರ ವಿಧಾನ ಸಭೆಯ ಚುನಾವಣೆಗೆ ತಾನೇ ಅಭ್ಯರ್ಥಿ ಎಂದು  ಫ್ಲೆಕ್ಸ್ ಗಳ್ಳನ್ನು ಅಳವಡಿಸಿದ್ದಾರೆ.

 
ಇದು ಟಿಕೆಟ್ ಆಕಾಂಕ್ಷಿ  ಪಿ.ರಮೇಶ್ ಅವರ ಕೋಪಕ್ಕೆ ಕಾರಣವಾಗಿದೆ.  ಹೆಚ್.ಸಿ. ಮಹದೇವಪ್ಪ ಅವರ ಭಾವಚಿತ್ರವಿರುವ ಫ್ಲೆಕ್ಸ್ ಗಳನ್ನು ಕಿಡಿಗೇಡಿಗಳು ಹರಿದುಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ