ಇರಾನ್ ನಿಂದ ನಮ್ಮ ಬೆಂಗಳೂರಿಗೆ ಯಾವೆಲ್ಲಾ ವಸ್ತುಗಳು ಬರುತ್ತವೆ ಗೊತ್ತಾ

Krishnaveni K

ಮಂಗಳವಾರ, 3 ಮಾರ್ಚ್ 2026 (10:35 IST)
ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧವೇರ್ಪಟ್ಟಿದೆ. ಎರಡೂ ದೇಶಗಳ ನಡುವಿನ ಯುದ್ಧ ಕರ್ನಾಟಕದ ಮೇಲೂ ಪರಿಣಾಮ ಬೀರುತ್ತಿದೆ. ಇರಾನ್ ನಿಂದ ನಮ್ಮ ಬೆಂಗಳೂರಿಗೆ ಯಾವೆಲ್ಲಾ ವಸ್ತು ಬರುತ್ತದೆ ಗೊತ್ತಾ?
 

ದೇಶದ ಬಹುತೇಕ ರಾಷ್ಟ್ರಗಳು ವ್ಯಾಪಾರ, ವಾಣಿಜ್ಯ ವಿಚಾರವಾಗಿ ಪರಸ್ಪರ ಸಂಬಂಧ ಹೊಂದಿವೆ. ಇರಾನ್ ಜೊತೆಗೂ ಭಾರತ ವ್ಯಾಪಾರ ವಹಿವಾಟು ಹೊಂದಿದೆ. ಅದರಲ್ಲೂ ಕರ್ನಾಟಕದ ರಾಜ್ಯ ರಾಜಧಾನಿ ಬೆಂಗಳೂರಿಗೂ ಅಲ್ಲಿಂದ ಅನೇಕ ವಸ್ತುಗಳು ಇಲ್ಲಿಗೆ ಬರುತ್ತವೆ.

ಬೆಂಗಳೂರಿಗೆ ಇರಾನ್ ನ ಕೇಸರಿ, ಒಣ ಹಣ್ಣುಗಳು, ದಾಲ್ಚಿನ್ನಿ ಸೋಂಪು, ಜಾಯಿಕಾಯಿ ಮುಂತಾದವು ಬರುತ್ತವೆ. ಅದರಲ್ಲೂ ಇರಾನ್ ನ ಕೇಸರಿಗೆ ಭಾರೀ ಬೇಡಿಕೆಯಿದೆ. ಡ್ರೈ ಫ್ರೂಟ್ಸ್ ಗಳು ಇಲ್ಲಿನ ಮಾರುಕಟ್ಟೆಗಳಲ್ಲಿ ಬೇಡಿಕೆಯಿದೆ. ಅದರಲ್ಲೂ ಈಗ ರಂಜಾನ್ ಹಬ್ಬವಾಗಿದ್ದು ಡ್ರೈ ಫ್ರೂಟ್ಸ್, ಕೇಸರಿಗೆ ಭಾರೀ ಬೇಡಿಕೆಯಿದೆ. ಆದರೆ ಈಗ ಇರಾನ್-ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿರುವುದರಿಂದ ವ್ಯಾಪಾರ ವಹಿವಾಟಿಗೆ ಅಡ್ಡಿಯಾಗಲಿದೆ. ಇದರಿಂದ ಡ್ರೈಫ್ರೂಟ್ಸ್ ಗಳು ದುಬಾರಿಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ