ಕಾಂಗ್ರೆಸ್ ಸರ್ಕಾರದ ವಿರುದ್ದ ಕೇಸರಿಪಡೆ ಬೃಹತ್ ಪ್ರತಿಭಟನೆ

ಮಂಗಳವಾರ, 17 ಅಕ್ಟೋಬರ್ 2023 (13:00 IST)
ಅಧಿಕಾರಕ್ಕೆ ಕಾಂಗ್ರೆಸ್ ಬಂದಾಗಿನಿಂದ ಭ್ರಷ್ಟಾಚಾರ ಲೂಟಿ, ಐಟಿ ರೇಡ್,ರೈತ ವಿರೋಧಿ ಜನ ವಿರೋಧಿ ನೀತಿಯನ್ನ ಮಾಡ್ತಿದೆ ಎಂದು ಖಂಡಿಸಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ  ಮಾಡಲಾಗಿದೆ.ಭಾರತೀಯ ಜನತಾ ಪಾರ್ಟಿ ನೇತ್ರತ್ವದಲ್ಲಿ ರಾಜ್ಯ ಭ್ರಷ್ಟ ATM ಕಾಂಗ್ರೆಸ್ ಸರಕಾರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು,ಪ್ರತಿಭಟನೆಯಲ್ಲಿ SBI tax, yet tax  ಭ್ರಷ್ಟಾಚಾರದ ಅಜೆಂಡಾವನ್ನ ಸಂಪ್ರದಾಯ ಮಾಡಿಕೊಂಡಿರು ಕಾಂಗ್ರೆಸ್ ಅಂತ ಆರೋಪ ಮಾಡಿದ್ದಾರೆ.ಪಂಚರಾಜ್ಯಗಳ ಚುನಾವಣೆಗೆ ಹಣ ಕಳಿಸುವುದಕ್ಕೆ ಕರ್ನಾಟಕವನ್ನ ATM ಕೇಂದ್ರ ಬಿಂದುವನ್ನಾಗಿಸಿಕೊಂಡಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.ಪ್ರತಿಭಟನೆಯಲ್ಲಿ ಮಾಜಿ ಸಿಎಂ ಡಿವಿ ಸದಾನಂದಗೌಡ, ಆರ್ ಅಶೋಕ್ , ಅಶ್ವತ್ಥ್ ನಾರಾಯಣ್, ಕೆ ಗೋಪಾಲಯ್ಯ, ತೇಜಸ್ವಿ ಸೂರ್ಯ ಭಾಗಿಯಾಗಿದ್ದರು.
 
ಎಟಿಎಂ ಸರ್ಕಾರ ಅಂತ ಬರೆಯಲ್ಪಟ್ಟ ಮೂರು ಎಟಿಎಂ ಮಾದರಿಗಳನ್ನ ಬಿಜೆಪಿ ಪ್ರತಿಭಟನೆಯಲ್ಲಿ  ಪ್ರದರ್ಶನಮಾಡಿದೆ.ಮೂರು ಮಾದರಿ ಎಟಿಎಂ ಯಂತ್ರಗಳ ಮೂಲಕ ಸರ್ಕಾರಕ್ಕೆ ಬಿಸಿಮೂಟಿಸಿದೆ.ಈ ಸರ್ಕಾರ ಎಐಸಿಸಿಗೆ ಎಟಿಎಂ ಆಗಿದೆ ಅಂತ ಬಿಜೆಪಿ ಬಿಂಬಿಸಲು ಮುಂದಾಗಿತ್ತು.ವಿಧಾನಸೌಧದಲ್ಲಿ ಬಿಎಸಿ ಸಭೆ ಇದ್ದ ಕಾರಣ ಪ್ರತಿಭಟನೆಗೆ ಚಾಲನೆ ಕೊಟ್ಟು ವಿಧಾನಸೌಧಕ್ಕೆ  ಆರ್ ಅಶೋಕ್ ತೆರಳಿದ್ರು.ಇತ್ತಾ ಫ್ರೀಡಂ ಪಾರ್ಕ್ ನಲ್ಲಿ ಕೇಸರಿ ಪಡೆಗಳ ಧರಣಿ ತೀವ್ರ ಸ್ವರೂಪ ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ