ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿಗೆ ಬೇಕಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಏರ್‌ಪೋರ್ಟ್‌ನಲ್ಲಿ ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟದ ಕಾರ್ಯಕರ್ತರು ಇಂದು ಹಾಸನದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಉದ್ದೇಶಿಸಿ ಮಾತನಾಡಿದ ಹೋರಾಟಗಾರ ಎಸ್.ಆರ್ ಹಿರೇಮಠ. “ಹಾಸನದ ಈ ಹೋರಾಟ ನಮ್ಮ ದೇಶ ಮಾತ್ರವಲ್ಲ ಜಗತ್ತಿನ ಮಹಿಳೆಯರ ಘನತೆ ಕಡೆಗೆ ಗೌರವದ ಕಡೆಗಿನ ನಡಿಗೆಯಾಗಿದೆ” ಎಂದರು.
ನಮ್ಮದು ದೇವೇಗೌಡರ ಕುಟುಂಬದ ಪಾಳೆಗಾರಿ ಮನಸ್ಥಿತಿಯ ವಿರುದ್ಧದದ್ದು ಆಗಿದ್ದು, ಅವರ ದರ್ಪದ ಕೃತ್ಯವನ್ನು ಕೊನೆಗಾಣಿಸುವ ಸಲುವಾಗಿದೆ ಎಂದರು.
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಪಾಳೆಗಾರಿಕೆ ವಿರುದ್ಧ ಹೋರಾಟ ನಡೆಯಿತು. ಈಗ ಹಾಸನದಲ್ಲಿ ಈ ದಬ್ಬಾಳಿಕೆ ಕೊನೆಗಾಣಿಸಲು ಹೋರಾಟ ಆರಂಭ ಆಗಿದೆ. ನೊಂದವರು ಧೈರ್ಯದಿಂದ ಹೊರ ಬಂದು ಮಾತನಾಡುವಂತೆ ಆಗಲಿ. ಸಿಎಂ, ಡಿಸಿಎಂ, ಗೃಹ ಸಚಿವರೇ ಈಗಲಾದರೂ ಹಾಸನಕ್ಕೆ ಬನ್ನಿ” ಎಂದು ಆಗ್ರಹಿಸಿದರು.