ಪುರಾತತ್ವ ಇಲಾಖೆಯ ಯಡವಟ್ಟಿನಿಂದಾಗಿ ಗುಂಜನರಸಿಂಹಸ್ವಾಮಿಗೆ ಆಪತ್ತು ಎದುರಾಗಿದೆ.
ನರಸಿಂಹಸ್ವಾಮಿ ದೇವಾಲಯ ಸಮೀಪ ದೇಗುಲ ಕಟ್ಟಡಕ್ಕೆ ನಿರ್ಮಾಣಕ್ಕೆ ಅನುಮತಿ ನೀಡಿರುವ ಅಧಿಕಾರಿಗಳ ಕ್ರಮಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.
ಪುರಾತತ್ವ ಇಲಾಖೆ ಕಾನೂನು ಉಲ್ಲಂಘನೆ ಮಾಡಿದೆ ಅಹೋಬಲ ಮಠದ ಆಡಳಿತ ಮಂಡಳಿ.
ಪುರಾತತ್ವ ಇಲಾಖೆ 100 ಮೀಟರ್ ಅಂತರ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಆದೇಶ ನೀಡಿರುವ ಪುರಾತತ್ವ ಇಲಾಖೆ ಆದರೆ ನಿಷೇಧಿತ ಪ್ರದೇಶದಲ್ಲಿ ಮಠ ನಿರ್ಮಾಣಕ್ಕೆ ಮುಂದಾಗಿದ್ದಾರೆ ಅಹೋಬಲ ಮಠ ಟ್ರಸ್ಟಿಗಳು.
ದೇವಾಲಯ ಸಮೀಪವಿರುವ ದಲಿತ ಕುಟುಂಬಕ್ಕೆ ನಿಷೇಧ ಹೇರಿರುವ ಅಧಿಕಾರಿಗಳು. ಮಠಕ್ಕೆ ನಿರ್ಮಾಣಕ್ಕೆ ಮಾತ್ರ ಅನುಮತಿ ನೀಡಿದೆ. ರಿಪೇರಿ ಮತ್ತು ನವೀಕರಣಕ್ಕಷ್ಟೇ ಅನುಮತಿ ನೀಡಲಾಗಿದ್ದು, ಮಠದ ಟ್ರಸ್ಟಿಗಳು ನಿಷೇಧಿತ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪುರಾತತ್ವ ಇಲಾಖೆ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಗುಂಜನರಸಿಂಹ ಸ್ವಾಮಿ ಭಕ್ತಾಧಿಗಳು ಮತ್ತು ಸ್ಥಳೀಯ ನಿವಾಸಿಗಳಿಂದ ಮಠ ನಿರ್ಮಾಣಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ತಿ. ನರಸೀಪುರದಲ್ಲಿ ಈ ಘಟನೆ ನಡೆದಿದೆ.
ಘಟನೆ ಬಗ್ಗೆ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ವಿರುದ್ದ ಜನರು ಕಿಡಿಕಾರುತ್ತಿದ್ದಾರೆ. ಪುರಾತತ್ವ ಇಲಾಖೆ ಅಧಿಕಾರಿಗಳ ನಿರ್ಲ್ಯಕ್ಷಕ್ಕೆ ಮತ್ತೊಂದು ಘಟನೆ ಇದಾಗಿದೆ.