ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರು ರವರಿಂದ ಮಾಧ್ಯಮ ಸಂವಾದ ಕಾರ್ಯಕ್ರಮ
ಮಂಗಳವಾರ, 2 ಮೇ 2023 (20:21 IST)
bbmp
ಮತ ಚಲಾಯಿಸುವ ಹಕ್ಕನ್ನು ಹೊಂದಿರುವವರು ಮತದಾನ ಮಾಡದಿರುವುದು ಘಾತಕದ ಸಂಗತಿಯಾಗಿದ್ದು, ಆಮಿಷಕ್ಕೊಳಗಾಗಿ ಮತ ನೀಡುವುದು ಮತದಾನ ಮಾಡದಿರುವುದಕ್ಕಿಂತಲೂ ದೊಡ್ದ ಘಾತಕದ ಸಂಗತಿಯೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ವಿಷಾಧ ವ್ಯಕ್ತಪಡಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಎಲ್ಲರಿಂದಲೂ ಮತದಾನ ಮಾಡಿಸಲು ಶ್ರಮವಹಿಸಿ ಕೆಲಸ ಮಾಡಲಾಗುತ್ತಿದೆ. ಕಳೆದ ಬಾರಿ ಶೇ. 55 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ. 75 ರಷ್ಟು ಮತದಾನವಾಗಲು ಸಾಕಷ್ಟು ರೀತಿಯಲ್ಲಿ ಪ್ರಯತ್ನಿಸುತ್ತಿದ್ದೇವೆ. ನಾವು ಎಷ್ಟೇ ಪ್ರಯತ್ನಿಸಿದರೂ ಕೂಡಾ ಎಲ್ಲವೂ ಮತದಾರರ ಕೈಯಲ್ಲಿದ್ದು, ಅವರು ಸ್ವಯಂಪ್ರೇರಿತರಾಗಿ ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಎಂದು ಹೇಳಿದರು.
ಸಾಂಖ್ಯಿಕ ಇಲಾಖೆಯ ಪ್ರಕಾರ ನಗರದಲ್ಲಿ 1.65 ಕೋಟಿ ಜನಸಂಖ್ಯೆಯಿದ್ದು, ನಗರರಲ್ಲಿ 97 ಲಕ್ಷ ಮತದಾರರಿದ್ದಾರೆ. ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 8,000 ಬೂತ್ ಮಟ್ಟದ ಅಧಿಕಾರಿಗಳುನ್ನು ನಿಯೋಜಿಸಿದ್ದ ಕಾರಣ ತಳಮಟ್ಟದಲ್ಲಿ ಸಮರ್ಪಕವಾಗಿ ಕೆಲಸ ಮಾಡಿದ ಕಾರಣ ಮತದಾರಪಟ್ಟಿಲ್ಲಿನ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಹೊಸದಾಗಿ ಸೇರ್ಪಡೆಯಾದಂತಹ ಮತದಾರರ ಗುರುತಿನ ಚೀಟಿಗಳನ್ನು ಅಂಚೆ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿರುವ ಎಲ್ಲರಿಗೂ ಏಪ್ರಿಲ್ 28 ರಿಂದ ಮತದಾರರ ಚೀಟಿ, ಮತದಾನದ ಮಾರ್ಗಸೂಚಿಯನ್ನು ನೀಡುತ್ತಿರುವುದರ ಜೊತೆಗೆ ಮತಗಟ್ಟೆಯ ವಿವರವನ್ನು ಕೂಡಾ ನೀಡಲಾಗುತ್ತಿದೆ. ಮತದಾನದ ದಿನಕ್ಕಿಂದ 6 ದಿನದ ಮುಂಚಿತವಾಗಿಯೇ ಎಲ್ಲರಿಗೂ ಮತದಾರರ ಚೀಟಿ ತಲುಪಿಸಲಾಗುವುದು. ಬಾರ್ ಕೋಡ್ ಸ್ಕಾö್ಯನ್ ಮಾಡಿಯೂ ಮಾಹಿತಿ ಪಡೆಯಬಹುದು. ಜೊತೆಗೆ ವಿ.ಹೆಚ್.ಎ ತಂತ್ರಾAಶದಲ್ಲಿಯೂ ಮತದಾನ ಗುರುತಿನ ಚೀಟಿಯ ಸಂಖ್ಯೆ ಹಾಕಿ ಮಾಹಿತಿ ಪಡೆದುಕೊಳ್ಳಬುದು ಎಂದುರು.
ನಗರದಲ್ಲಿ ಸುಮಾರು 3,600 ಸ್ಥಳಗಳಲ್ಲಿ 8,802 ಮತಗಟ್ಟೆಗಳಿದ್ದು, ಎಲ್ಲಾ ಮತಗಟ್ಟೆಗಳ ಬಳಿಯೂ ಸ್ವಚ್ಛತಾ ಆಂದೋಲನೆ ನಡೆಸಲಾಗುವುದು. ಮತಗಟ್ಟೆಗಳ ಬಳಿಯಿರುವ ರಾಜಕಾಲುವೆಗಳಲ್ಲಿ ಹೂಳೆತ್ತುವ ಕೆಲಸ ಮಾಡಲಾಗುವುದು. ಎಲ್ಲಾ ಮತಗಟ್ಟೆ ಕನಿಷ್ಠ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುವುದು. 1,500 ಮತಗಟ್ಟೆಗಳ ಬಳಿ ನೆರಳಿಗಾಗಿ ಪೆಂಡಾಲ್ ವ್ಯವಸ್ಥೆ ಮಾಡಲಾಗುವುದು. ಮತಗಟ್ಟೆಗಳಿಗೆ ರಸ್ತೆ ಸರಿಯಾಗಿಲ್ಲದಿದ್ದರೆ ಅದನ್ನು ಸರಿಪಡಿಸಲಾಗುವುದು. ನಗರದಲ್ಲಿ ಪಿಂಕ್ ಬೂತ್, ವಿಕಲ ಚೇತನರ ಬೂತ್, ಪರಿಸರ ಬೂತ್, ಡಿಜಿಟಲ್ ಬೂತ್, ಯುವ ಸಮೂಹ ಬೂತ್ ಸೇರಿದಂತೆ ಸುಮಾರು 300 ಥೀಮ್ ಆಧಾರಿತ ಮತಗಟ್ಟೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಸಂಬAಧ 8,802 ಮತಗಟ್ಟೆಗಳಿಗೆ ಸುಮಾರು 36 ಸಾವಿರ ಸಿಬ್ಬಂದಿ, ಸೆಕ್ಟರ್ ಮೆಜಿಸ್ಟ್ರೇಟ್, ಮೈಕ್ರೋ ಅಬ್ಸರ್‌ವರ್ಸ್ ಸೇರಿದಂತೆ ಬೇರೆ ಬೇರೆ ಕೆಲಸ ಕಾರ್ಯಗಳಿಗಾಗಿ ಒಟ್ಟಾರೆ 42,000 ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಅತಿ ಸೂಕ್ಷ್ಮ, ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪ್ಯಾರಾ ಮಿಲಿಟರಿ, ಪೊಲೀಸ್ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್ ಗಳನ್ನು ನಿಯೋಜಿಸಲಾಗಿದೆ.
ನಗರದಲ್ಲಿ ಕಾನೂನು ವ್ಯಸವ್ಥೆಯ ಮೂಲಕ ಚುನಾವಣೆ ನಡೆಯಲಿದ್ದು, ಸೌಹಾರ್ದತೆಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣೆ ನಡೆಯಲಿದೆ. ನಾಗರಿಕರಿಗೆ ಭಯಪಡಿಸಿ ಮತಪಡೆಯಲು ಸಾಧ್ಯವಿಲ್ಲ. ನಾವು ಆ ರೀತಿಯಾಗಲು ಅವಕಾಶ ನೀಡುವುದಿಲ್ಲ. ಅಹಿತಕರ ಘಟನೆ ಸೃಷ್ಟಿಸುವಂತಹರ ಮೇಲೆ ಪೊಲೀಸ್ ಸಿಬ್ಬಂದಿಯು ನಿಗಾವಹಿಸಿದ್ದಾರೆ ಎಂದು ಹೇಳಿದರು.
ನಗರದಲ್ಲಿ 250ಕ್ಕೂ ಹೆಚ್ಚು ಫ್ಲೆöÊಯಿಂಗ್ ಸ್ಕಾ÷್ವಡ್, 230 ವೀಡಿಯೋ ಟೀಮ್, 35 ವೀಡಿಯೋ ವೀವಿಂಗ್ ಟೀಮ್, ಎಲ್ಲದರ ಮೇಲೂ ಹೆಚ್ಚು ನಿಗಾವಹಿಸಲಾಗುವುದು. ಮುಂದಿನ ವಾರ ಮತದಾನ ನಡೆಯಲಿದ್ದು, ಏನಾದರೂ ಆಮೀಷಗಳು ಬಂದಲ್ಲಿ ಸಿ-ವಿಜಿಲ್ ತಂತ್ರಾಂಶದಲ್ಲಿ ದೂರು ದಾಖಲಿಸಿ. ಸಿ-ವಿಜಿಲ್ ಮೂಲಕ ದೂರು ನೀಡಿದರೆ ಭ್ರಷ್ಠ ಚಟುವಟಿಕೆಗಳನ್ನು ನಿಲ್ಲಿಸಬಹುದಾಗಿದೆ ಎಂದರು.ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷರಾದ ಶ್ರೀಧರ್, ಪ್ರಧಾನ ಕಾರ್ಯದರ್ಶಿಯಾದ ಬಿ.ಪಿ.ಮಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.