ಮೆಕನ್ ಚಂಡುಮಾರುತ ಹಾವಳಿಗೆ ತತ್ತರಿಸಿದ ಉಡುಪಿ

ಮಂಗಳವಾರ, 29 ಮೇ 2018 (18:39 IST)
ಕಳೆದೆರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಗುಡುಗು‌ ಮಿಂಚು ಸಹಿತ ಮಳೆ ಹಲವಾರು ಅನಾಹುತಗಳನ್ನು ಸೃಷ್ಟಿ ಮಾಡಿದೆ.
ರಾತ್ರಿ ಹೊತ್ತಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಜಿಲ್ಲಾದ್ಯಾಂತ ಹಲವು ಮರಗಳು ಧರೆಗುಳಿದಿದೆ.ಕೆಲವೊಂದು‌ ಮರಗಳು ಮನೆ ಮೇಲೆ ಉರುಳಿದ್ದು ಅಪಾರ ಅಸ್ತಪಾಸ್ತಿ ನಷ್ಟ ಉಂಟಾಗಿದೆ.ರಸ್ತೆ ಬದಿಗಳಲ್ಲಿ ಇದ್ದ ಮರಗಳು ವಿದ್ಯೂತ್ ತಂತಿಗಳ ಮೇಲೆ  ಬಿದ್ದು ವಿದ್ಯೂತ್ ಕಂಬಗಳು ಮುರಿದು ಬಿದ್ದಿದ್ದು, ಮೆಸ್ಕಾಂ ಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
 
ಇದರಿಂದಾಗಿ‌ ಉಡುಪಿಯ ಹೆಚ್ಚಿನ‌ ಕಡೆಗಳಲ್ಲಿ ಎರಡು ದಿನಗಳಿಂದ ವಿದ್ಯೂತ್ ಇಲ್ಲದೇ ಕತ್ತಲ್ಲಲ್ಲಿ ಕಳೆಯುವಂತಾಗಿದೆ. ಬೃಹತ್ ಕಂಬಗಳು ಹಾಗೂ ಮರಗಳು ರಸ್ತೆಗುರುಳಿದ ಪರಿಣಾಮ ಹಲವು ಕಡೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
 
ಇನ್ನೂ ಗುಡುಗು ಸಿಡಿಲಿನ ಅಬ್ಬರ ಜೋರಾಗಿದ್ದು ಸಿಡಿಲಿನಬ್ಬರಕ್ಕೆ ಕಾರ್ಕಳದ ಬೈಲೂರಿನಲ್ಲಿ ಒಬ್ಬ ಮಹಿಳೆ ಮೃತರಾಗಿದ್ದಾರೆ.ಬೈಲೂರಿಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಶೀಲಾ ಎಂಬವರು ಸಿಡಿಲಿಗೆ ಬಲಿಯಾಗಿದ್ದು ,ಜೊತೆಯಲ್ಲಿ ಮಲಗಿದ್ದ ಪತಿ ಗಂಭೀರಾ ಗಾಯಗೊಂಡು ಕಾರ್ಕಳ ಸರ್ಕಾರಿ ಅಸ್ಪತ್ರೆಗೆ ದಾಖಲಾಗಿದ್ದಾರೆ.
 
ತುರ್ತು ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಕ್ರಮಗಳನ್ನು ಕೈಗೊಂಡಿದ್ದು,ಅಗ್ನಿ ಶಾಮಕ ದಳ ಸೇರಿದಂತೆ ಎಲ್ಲಾ  ಇಲಾಖೆ ಗಳು ಮಳೆ ಪರಿಹಾರಕ್ಕೆ ಸಿದ್ದರಾಗಿರುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ