ವಿದ್ಯಾರ್ಥಿನಿಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ 19 ವರ್ಷದ ಯುವಕ

ಗುರುವಾರ, 26 ನವೆಂಬರ್ 2020 (12:53 IST)
ಗುರುಗ್ರಾಮ : 19 ವರ್ಷದ ಯುವಕಯೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಪದೇ ಪದೇ ಮಾನಭಂಗ ಎಸಗಿ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ಆರೋಪಿ ಹಾಗೂ ಸಂತ್ರಸ್ತೆ ಪರಿಚಯದವರಾಗಿದ್ದು, ಸಂತ್ರಸ್ತೆ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ. ಒಮ್ಮೆ ಆಕೆ  ಮನೆಯಲ್ಲಿ ಒಬ್ಬಳೇ ಇದ್ದಾಗ ಭೇಟಿ ನೀಡಿದ ಆರೋಪಿ ಮೊದಲಬಾರಿಗೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಆಕೆಯ ಮೇಲೆ ಪದೇ ಪದೇ ಮಾನಭಂಗ ಎಸಗಿದ್ದಾನೆ. ಹುಡುಗಿಯ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದ ಹಿನ್ನಲೆಯಲ್ಲಿ ಆಕೆಯ ಅಕ್ಕ ಈ ಬಗ್ಗೆ ವಿಚಾರಿಸಿದಾಗ ಸಂತ್ರಸ್ತೆ ವಿಷಯ ತಿಳಿಸಿದ್ದಾಳೆ.

ತಕ್ಷಣ ಮನೆಯವರು ಆರೋಪಿ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ