ತಾಯಿಯ ಮೇಲೆ ಇಂತಹ ನೀಚ ಕೃತ್ಯ ಎಸಗಿದ ಮಗ!

ಭಾನುವಾರ, 22 ನವೆಂಬರ್ 2020 (06:48 IST)
ಗುರುಗ್ರಾಮ : 25 ವರ್ಷದ ಯುವಕನೊಬ್ಬ ತನ್ನ ತಾಯಿಯ ಮೇಲೆ ಮಾನಭಂಗ ಎಸಗಿ ಕೊಲೆ ಮಾಡಿದ ಘಟನೆ ಪಟೌಡಿಯಲ್ಲಿ ನಡೆದಿದೆ.

ಆರೋಪಿಯ ತಂದೆ ಊರಿನ ಹೊರವಲಯದಲ್ಲಿ ತರಕಾರಿ ಮಾರುತ್ತಾನೆ. ಸಂತ್ರಸ್ತ ಮಹಿಳೆ ತನ್ನ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಆದರೆ ಮಗ ತನ್ನ ತಾಯಿಯ ಮೇಲೆ ಮಾನಭಂಗ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ತಂದೆಗೆ ತಾಯಿ ಸತ್ತಿದ್ದಾಳೆಂದು ಮಾಹಿತಿ ನೀಡಿದ್ದಾನೆ. ಮನೆಗೆ ಬಂದ ತಂದೆ ಪತ್ನಿ ಮಂಚದ ಮೇಲೆ ಸತ್ತು ಬಿದ್ದಿದ್ದು, ಕುತ್ತಿಗೆಯಲ್ಲಿ ಗುರುತು ಇರುವುದನ್ನು  ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಶವವನ್ನು ಪರೀಕ್ಷೆಗೆ ಒಳಪಡಿಸಿದಾಗ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಅನುಮಾನಗೊಂಡು ಮಗನನ್ನು ಬಂಧಿಸಿ ವಿಚಾರಿಸಿದಾಗ ಸತ್ಯ ತಿಳಿದುಬಂದಿದೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ