ಮನೋರೋಗಿ ಮೇಲೆ ಪೊಲೀಸ್ ಅತ್ಯಾಚಾರ

ಸೋಮವಾರ, 16 ಜನವರಿ 2017 (07:22 IST)
ಮಾನಸಿಕ ಅಸ್ವಸ್ಥೆಯೋರ್ವಳ ಮೇಲೆ ಮುಖ್ಯ ಪೊಲೀಸ್ ಪೇದೆಯೋರ್ವ ಅತ್ಯಾಚಾರ ಮಾಡಿದ ಹೇಯ ಘಟನೆ ಕಲ್ಪತರು ನಾಡು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.
 
ಆರೋಪಿಯನ್ನು ಉಮೇಶ್ ಎಂದು ಗುರುತಿಸಲಾಗಿದ್ದು ಆತನೀಗ ಪೊಲೀಸರ ವಶದಲ್ಲಿದ್ದಾನೆ.
 
ಘಟನೆ ವಿವರ: ನಿವಾರ ರಾತ್ರಿ 1.30 ರ ಸುಮಾರಿಗೆ ಖಾಸಗಿ ವಾಹನದಲ್ಲಿ ಗಸ್ತು ತಿರುಗುತ್ತಿದ್ದ ಉಮೇಶ್‌ಗೆ  ಅಂತರಸನಳ್ಳಿ ಬೈಪಾಸ್ ರಸ್ತೆ ಸೇತುವೆ ಬಳಿ ಮಾನಸಿಕ ಅಸ್ವಸ್ಥೆ ಕಂಡಿದ್ದಾಳೆ. ಮಹಿಳೆಯ ಬಳಿ ಪೂರ್ವಾಪರ ವಿಚಾರಿಸಿದ ಉಮೇಶ್ ಮನೆಗೆ ಬಿಡುತ್ತೇನೆಂದು ಗಾಡಿಯಲ್ಲಿ ಹತ್ತಿಸಿಕೊಂಡು ಚಲಿಸುವ ವಾಹನದಲ್ಲಿಯೇ ಅತ್ಯಾಚಾರವೆಸಗಿ ಹಲ್ಲೆ ನಡೆಸಿದ್ದಾನೆ ಎಂದು ಪೀಡಿತಳ ಕುಟುಂಬದವರು ದೂರಿದ್ದಾರೆ. 
 
ಪೀಡಿತಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ