ಸಿಬ್ಬಂದಿ ಮೇಲೆ ಹಲ್ಲೆ, ಬಂಧನ ಖಂಡಿಸಿ ಪ್ರತಿಭಟನೆ: ಮೆಟ್ರೋ ಸಂಚಾರ ಸ್ಥಗಿತ

ಶುಕ್ರವಾರ, 7 ಜುಲೈ 2017 (09:57 IST)
ಬೆಂಗಳೂರು:ಮೆಟ್ರೋ ಸಿಬ್ಬಂದಿಯ ಮೇಲೆ ಪೊಲೀಸ್ ಸಿಬಂದಿ ಹಲ್ಲೆ ಹಾಗೂ ಬಂಧನ ಖಂಡಿಸಿ ಮೆಟ್ರೋ ಸಿಬಂದಿಗಳು ಪ್ರತಿಭಟನೆಗಿಗಳಿದಿದ್ದು, ಇಂದು ನರರದಲ್ಲಿ ಮೆಟ್ರೋ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
 
ಸರ್‌ ಎಂ.ವಿಶ್ವೇಶ್ವರಯ್ಯ ಸೆಂಟ್ರಲ್‌ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಕ್ಷುಲಕ್ಕ ವಿಚಾರಕ್ಕೆ ಗುರುವಾರ ಮೆಟ್ರೋ ಸಿಬ್ಬಂದಿ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ನಡುವೆ ನಿನ್ನೆ  ಮಾರಾಮಾರಿ ನಡೆದಿತ್ತು. ಘಟನೆಯನ್ನು  ಖಂಡಿಸಿ ಮೆಟ್ರೋ ಸಿಬ್ಬಂದಿ ಭದ್ರತಾ ಪಡೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ರಾಕೇಶ್‌ ಮತ್ತು ಹರೀಶ್‌ ಎಂಬ ಇಬ್ಬರು ಮೆಟ್ರೋ ಸಿಬ್ಬಂದಿಯನ್ನು ಹಲಸೂರು ಗೇಟ್‌ ಪೊಲೀಸರು ಬಂಧಿಸಿದ್ದಾರೆ. 
 
ಘಟನೆ ಖಂಡುಸಿ ಮೆಟ್ರೋ ಸಿಬ್ಬಂದಿಗಳು ಪ್ರತಿಭಟನೆ ತೀವ್ರಗೊಳಿಸಿದ್ದು, ಇದೀಗ ಸಂಪೂರ್ಣ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. ನಿತ್ಯ ಮೆಟ್ರೋ ಅವಲಂಬಿಸುತ್ತಿದ್ದ  ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿದೆ. 
 

ವೆಬ್ದುನಿಯಾವನ್ನು ಓದಿ