ಭಾರತ–ಪಾಕ್‌ ಯುದ್ಧಕ್ಕೆ ಮಧ್ಯಸ್ಥಿಕೆ ನಮ್ಮದೇ: ಟ್ರಂಪ್‌ ಪರ ಮಾರ್ಕೊ ರುಬಿಯೊ ಬ್ಯಾಟಿಂಗ್‌

Sampriya

ಶುಕ್ರವಾರ, 8 ಆಗಸ್ಟ್ 2025 (12:12 IST)
Photo Credit X
ನ್ಯೂಯಾರ್ಕ್‌: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಿದ್ದೇ ನಾನು ಎಂದು ಅಮೆರಿಕಾ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಸಾಕಷ್ಟು ಬಾರಿ ಹೇಳಿದ್ದರು. ಈಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೂ ಟ್ರಂಪ್‌ ಪರ ಬ್ಯಾಟಿಂಗ್‌ ಮಾಡಿದ್ಧಾರೆ. 

ಭಾರತ ಮತ್ತು ಪಾಕ್‌ ಯುದ್ಧದ ಮಧ್ಯಸ್ಥಿಕೆಯಲ್ಲಿ ಅಮೆರಿಕಾ ಕೂಡ ನೇರವಾಗಿ ಭಾಗಿಯಾಗಿತ್ತು. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಪರಮಾಣು ಸಶಸ್ತ್ರ ದೇಶಗಳ ನಡುವೆ ಕದನ ವಿರಾಮ ಏರ್ಪಟ್ಟಿತು ಎಂದು ರುಬಿಯೊ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ಸಂದರ್ಶನದ ವೇಳೆ ರುಬಿಯೊ, ಟ್ರಂಪ್‌ ಹೇಳಿಕೆಯನ್ನು ಪುನರುಚ್ಚರಿಸಿದ್ದು, ಟ್ರಂಪ್ ಶಾಂತಿಗೆ ಬದ್ಧರಾಗಿದ್ದಾರೆ ಮತ್ತು ಶಾಂತಿಯ ಅಧ್ಯಕ್ಷರೂ ಆಗಿದ್ದಾರೆ ಎಂದು ಕೊಂಡಾಡಿದ್ದಾರೆ

ಇತ್ತೀಚೆಗೆ ಕಾಂಬೋಡಿಯಾ –ಥಾಯ್ಲೆಂಡ್, ಅಜರ್‌ಬೈಜಾನ್– ಅರ್ಮೇನಿಯಾ ಸೇರಿದಂತೆ, 30 ವರ್ಷಗಳಿಂದ ನಡೆಯುತ್ತಿರುವ ಡಿಆರ್‌ಸಿ (ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ)-ರುವಾಂಡಾ ನಡುವೆ ಶಾಂತಿ ಸ್ಥಾಪಿಸಿ ಕದನ ವಿರಾಮಕ್ಕೆ ಸಹಿ ಹಾಕಿಸಲು ಸಾಧ್ಯವಾಯಿತು ಎಂದು ರುಬಿಯೊ ಹೇಳಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ