ಲಾಕ್ ಡೌನ್ ಮೆಟ್ರೋ ಸೇವೆ ವ್ಯತ್ಯಯ

ಬುಧವಾರ, 5 ಜನವರಿ 2022 (17:50 IST)
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ, ನಮ್ಮ ಮೆಟ್ರೊ' ಸೇವೆಯನ್ನು ಮುಂದುವರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿರ್ಧಾರ ಮಾಡಿದೆ. ಅದರಂತೆ ರೈಲು ಸಂಚಾರದ ಸಮಯವನ್ನು ಪರಿಷ್ಕರಿಸಲಾಗಿದ್ದು, ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ಟರ್ಮಿನಲ್‌ ನಿಲ್ದಾಣಗಳಿಂದ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 8ರಿಂದ ರಾತ್ರಿ 9 ಗಂಟೆಯವರೆಗೆ ಮೆಟ್ರೊ ರೈಲು ಸೇವೆ ಇರಲಿದೆ
ಟರ್ಮಿನಲ್‌ ನಿಲ್ದಾಣಗಳಿಂದ ಪ್ರತಿ 20 ನಿಮಿಷಗಳಿಗೆ ಒಂದು ರೈಲು ಹೊರಡಲಿದ್ದು, ಟರ್ಮಿನಲ್‌ ನಿಲ್ದಾಣದಿಂದ ದಿನದ ಕೊನೆಯ ರೈಲು ರಾತ್ರಿ 9 ಗಂಟೆಗೆ ಹೊರಡಲಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ