ಖ್ಯಾತ ಗಾಯಕ ಸೋನು ನಿಗಂ ಮತ್ತು ಕುಟುಂಬಕ್ಕೆ ಕೊರೋನಾ ಸೋಂಕು

ಬುಧವಾರ, 5 ಜನವರಿ 2022 (09:20 IST)
ದುಬೈ: ಬಹುಭಾಷಾ ಗಾಯಕ ಸೋನು ನಿಗಂ ಮತ್ತು ಕುಟುಂಬಸ್ಥರಿಗೆ ಕೊರೋನಾ ಸೋಂಕು ಧೃಢಪಟ್ಟಿದೆ.

ಸದ್ಯಕ್ಕೆ ದುಬೈನಲ್ಲಿರುವ ಸೋನು ನಿಗಂ ವಿಡಿಯೋ ಮೂಲಕ ಈ ವಿಚಾರ ಹಂಚಿಕೊಂಡಿದ್ದಾರೆ. ತಮಗೆ, ಪತ್ನಿ ಹಾಗೂ ಪುತ್ರನಿಗೂ  ಸೋಂಕು ತಗುಲಿರುವುದಾಗಿ ಸೋನು ನಿಗಂ ಹೇಳಿದ್ದಾರೆ.

ಆದರೆ ತನಗೆ ಅಲ್ಪ ಪ್ರಮಾಣದ ಲಕ್ಷಣಗಳಿವೆಯಷ್ಟೇ. ಸೋಂಕು ತಗುಲಿದೆ ಎಂದು ಗೊತ್ತೇ ಆಗುತ್ತಿಲ್ಲ ಎಂದು ಸೋನು ಹೇಳಿದ್ದಾರೆ. ಎಲ್ಲಾ ಸರಿ ಹೋಗಿದ್ದರೆ ಭುವನೇಶ್ವರ್ ನಲ್ಲಿ ಒಂದು ಶೋನಲ್ಲಿ ಭಾಗಿಯಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಸದ್ಯಕ್ಕೆ ಅವರು ಹೋಂ ಐಸೋಲೇಷನ್ ನಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ