ದೀಪಾವಳಿಗೆ ಪಟಾಕಿ ಹೊಡೆಯಲು ಕಠಿಣ ಷರತ್ತು ವಿಧಿಸಿದ ರಾಜ್ಯ ಸರ್ಕಾರ

Krishnaveni K

ಸೋಮವಾರ, 6 ಅಕ್ಟೋಬರ್ 2025 (13:34 IST)
ಬೆಂಗಳೂರು: ದೀಪಾವಳಿ ಹಬ್ಬ ಇನ್ನೇನು ಹತ್ತಿರ ಬಂದಿದ್ದು ಈ ವೇಳೆ ಪಟಾಕಿ ಹೊಡೆಯುವವರಿಗೆ ಕೆಲವೊಂದು ಕಠಿಣ ಷರತ್ತುಗಳನ್ನು ರಾಜ್ಯ ಸರ್ಕಾರ ವಿಧಿಸಿದೆ.

ಪ್ರತೀ ಬಾರಿ ದೀಪಾವಳಿ ಬಂತೆಂದರೆ ಮನೆ ಮನೆಯಲ್ಲಿ ಥರ ಥರದ ಪಟಾಕಿ ಹೊಡೆಯುವುದು ಸರ್ವೇ ಸಾಮಾನ್ಯ. ಆದರೆ ಪಟಾಕಿಯಿಂದಾಗಿ ವಾಯು ಮಾಲಿನ್ಯ ಮತ್ತು ಶಬ್ಧ ಮಾಲಿನ್ಯವಾಗುತ್ತದೆ ಎಂದು ಪರಿಸರವಾದಿಗಳ ಅಳಲಾಗಿದೆ. ಈ ನಿಟ್ಟಿನಲ್ಲಿ ಪ್ರತೀ ವರ್ಷವೂ ಸರ್ಕಾರ ಕೆಲವೊಂದು ನಿಯಮಗಳನ್ನು ವಿಧಿಸುತ್ತದೆ.

ಅದರಂತೆ ಈ ಬಾರಿಯೂ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಹೊಡೆಯಬೇಕು ಎಂದು ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಹೊಡೆದರೆ ಅಂಗಡಿ ಲೈಸೆನ್ಸ್ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ಆದೇಶವಿದ್ದರೂ ಭಾರವಿರುವ, ಲೋಹ ಬಳಸಿದ ಪಟಾಕಿಗಳನ್ನು ಬಳಸುತ್ತಾರೆ. ಹೀಗಾಗಿ ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಹೊಡೆಯುವಂತಿಲ್ಲ. ಮಳಿಗೆಗಳಿಗೆ ಹೋಗಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಿಯಮ ಮೀರಿ ಪಟಾಕಿಗಳನ್ನು ಮಾರಿದರೆ ಲೈಸೆನ್ಸ್ ರದ್ದುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ