ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

Sampriya

ಮಂಗಳವಾರ, 12 ಆಗಸ್ಟ್ 2025 (18:31 IST)
Photo Credit X
ಬೆಂಗಳೂರು: ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ  ಅಗತ್ಯವಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಮಂಗಳವಾರ ಹೇಳಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, 150 ವರ್ಷಗಳ ನಂತರವೂ ಬೆಂಗಳೂರಿನಲ್ಲಿ ಲಾಲ್ ಬಾಗ್ ಅಥವಾ ಕಬ್ಬನ್ ಪಾರ್ಕ್‌ನಂತಹ ಪ್ರಮುಖ ಉದ್ಯಾನವನಗಳು ಇಲ್ಲ ಎಂದರು.

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಪರಿಣಾಮಕ್ಕೆ ಮರ ಗಿಡ ಬೆಳೆಸುವುದು ನಮ್ಮ ಮುಂದಿರುವ ಏಕೈಕ ಪರಿಹಾರವಾಗಿದೆ. ಈ ಕುರಿತು ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಒಬ್ಬ ವ್ಯಕ್ತಿ ಆರಾಮವಾಗಿ ಬದುಕಲು ಏಳು ಮರಗಳು ಬೇಕಾಗಿದ್ದರೆ, ಬೆಂಗಳೂರಿನಲ್ಲಿ ಏಳು ಮಂದಿಗೆ ಒಂದೇ ಮರ ಎಂಬಂತಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ