ಮಹಿಳಾ ದಿನಾಚರಣೆ ಅಮೃತದಾರೆ ಎದೆಹಾಲು ಬ್ಯಾಂಕ್

ಮಂಗಳವಾರ, 8 ಮಾರ್ಚ್ 2022 (14:59 IST)
ಕೆಲವು ಮಕ್ಕಳು ಹುಟ್ಟುವಾಗಲೇ ತಾಯಿ ಕಳೆದುಕೊಂಡೋ ಅಥವಾ ನಾನಾ ಕಾರಣಕ್ಕೆ ಶಿಶುಗಳಿಗೆ ಎದೆ ಹಾಲಿನ ಕೊರತೆ ಆಗುತ್ತೆ. ಇದನ್ನು ತಪ್ಪಿಸಲು ಎದೆಹಾಲು ಬ್ಯಾಂಕ್ ಆರಂಭಿಸಲಾಗಿದೆ. ರಾಜ್ಯದ ಮೈಸೂರು, ಬೆಂಗಳೂರು, ಬೆಳಗಾವಿ ಸೇರಿದಂತೆ ನಾಲ್ಕು ಕಡೆ ಎದೆಹಾಲು ಬ್ಯಾಂಕ್ ಕಾರ್ಯ ರೂಪಕ್ಕೆ ಬರಲಿದೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.
ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ಅಮೃತಕ್ಕೆ ಸಮ.. ಇಂತಹ ಅಮೃತಪಾನವನ್ನು ಸರಿಯಾದ ಸಮಯದಲ್ಲಿ ಪಡೆಯಲು ಆಗದೇ ಅದೆಷ್ಟು ನವಜಾತ ಶಿಶುಗಳು ಮರಣ ಹೊಂದಿರುವುದನ್ನ ನೋಡಿದ್ದೇವೆ. ಹೀಗಾಗಿ ಶಿಶುಗಳಿಗೆ ಅಮೃತವಾಗಿರುವ ಎದೆಹಾಲಿನ‌ ಬ್ಯಾಂಕ್​ಗೆ ವಿಶ್ವ ಮಹಿಳಾ ದಿನದಂದೇ ಚಾಲನೆ ನೀಡಲಾಯಿತು.
 
ಮಂಗಳವಾರ ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಬಿಎಂಸಿಆರ್ ಐನಲ್ಲಿ ಅಮೃತಧಾರೆ ಎದೆಹಾಲು ಬ್ಯಾಂಕ್ ಹಾಗೂ ಗರ್ಭಿಣಿಯರ ತುರ್ತು ಚಿಕಿತ್ಸಾ ವಾರ್ಡ್​​ ಅನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಉದ್ಘಾಟಿಸಿದರು. ಈ ವೇಳೆ ಮಾತಾನಾಡಿದ ಸಚಿವರು, ಮಕ್ಕಳಿಗೆ ತಾಯಿ ಎದೆಹಾಲು ಅಮೃತದಂತೆ. ಹೀಗಾಗಿ ಇದರಿಂದ ಯಾವ ಮಕ್ಕಳು ವಂಚಿತರಾಗಬಾರದು. ಕೆಲವು ಮಕ್ಕಳು ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡೋ ಅಥವಾ ನಾನಾ ಕಾರಣಕ್ಕೆ ಶಿಶುಗಳಿಗೆ ಎದೆ ಹಾಲಿನ ಕೊರತೆ ಆಗುತ್ತೆ. ಇದನ್ನು ತಪ್ಪಿಸಲು ಎದೆಹಾಲು ಬ್ಯಾಂಕ್ ಆರಂಭಿಸಲಾಗಿದೆ. ರಾಜ್ಯದ ಮೈಸೂರು, ಬೆಂಗಳೂರು, ಬೆಳಗಾವಿ ಸೇರಿದಂತೆ ನಾಲ್ಕು ಕಡೆ ಎದೆಹಾಲು ಬ್ಯಾಂಕ್ ಕಾರ್ಯ ರೂಪಕ್ಕೆ ಬರಲಿದೆ ಎಂದು ತಿಳಿಸಿದರು.
 
ತಾಯಿಯ ಎದೆಹಾಲಿನಲ್ಲಿ ಪ್ರೊಟೀನ್, ಲವಣಾಂಶ, ಶರ್ಕರಪಿಷ್ಠ, ಫ್ಯಾಟ್ ಮೊದಲಾದ ಪ್ರತಿರೋಧಕ ಹೆಚ್ಚಿಸುವ ಜೀವಕಣಗಳಿದೆ. ಮೊದಲಿಗೆ ಈ ಉಪಕರಣವನ್ನು ಬಳಸಿ ಎದೆಹಾಲು ಡೊನೇಟ್ ಮಾಡುವ ತಾಯಿಯಿಂದ ಎದೆಹಾಲನ್ನು ಪಂಪ್ ಮಾಡಿ ಪ್ಯಾಶ್ಚುರೈಸೇಶನ್ ಪ್ರಕ್ರಿಯೆ ಬಳಿಕ ಅದನ್ನು ಶೀತಲಿಕರಣಗೊಳಿಸಿ ಸಂಗ್ರಹಿಸಲಾಗುತ್ತದೆ. ಈ ಎದೆಹಾಲು ಆರು ತಿಂಗಳವರೆಗೆ ರಕ್ಷಿಸಿಡುವ ವ್ಯವಸ್ಥೆ ಇಲ್ಲಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ತಾಯಂದಿರು ಎದೆಹಾಲು ದಾನ ಮಾಡುವ ಬಗ್ಗೆ ಒಲವು ತೋರಬೇಕಾಗಿದೆ. ತಾಯಂದಿರು ದಾನ ಮಾಡುವ ಎದೆಹಾಲು ಮಕ್ಕಳ ಜೀವವುಳಿಸಲು ನೆರವಾಗಲಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ