ಅಧಿಕಾರಿಗಳ ವರ್ತನೆಗೆ ಬೇಸತ್ತು ತಾನೇ ರಸ್ತೆ ನಿರ್ಮಿಸಲು ಮುಂದಾದ ಸಚಿವ!
ಅಧಿಕಾರಿಗಳ ಬೇಜವಬ್ಧಾರಿಗೆ ಬೇಸತ್ತು ಉತ್ತರ ಪ್ರದೇಶದ ಸಚಿವ ಪ್ರಕಾಶ್ ರಾಜ್ ಭರ್ ತಾವೇ ರಸ್ತೆ ರಿಪೇರಿ ಮಾಡಿದ ಘಟನೆ ನಡೆದಿದೆ. ಅಂದ ಹಾಗೆ ಇದು ನಡೆದಿರುವುದು ವಾರಣಾಸಿ ಗ್ರಾಮದ ಸಚಿವರ ಮನೆ ಹತ್ತಿರದಲ್ಲಿ.
ಸಚಿವರ ಮನೆ ಪಕ್ಕದಲ್ಲೇ ಇರುವ ರಸ್ತೆ ಕೆಟ್ಟು ತುಂಬಾ ದಿನಗಳಾಗಿತ್ತು. ಇದನ್ನು ರಿಪೇರಿ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಎಷ್ಟೇ ಹೇಳಿದರೂ ಮಾಡಿರಲಿಲ್ಲ. ಹೀಗಾಗಿ ಬೇಸತ್ತ ಸಚಿವರು ತಾವೇ ಗುದ್ದಲಿ ತೆಗೆದುಕೊಂಡು ರಸ್ತೆ ರಿಪೇರಿಗೆ ಮುಂದಾದರು. ಸಚಿವರ ಕೆಲಸ ನೋಡಿ ಸ್ಥಳೀಯರೂ ಅವರಿಗೆ ನೆರವಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.