ಬೆಳೆಗಾರರಿಗೆ ಸರ್ಕಾರದಿಂದ ಪರಿಹಾರ ಎಂದ ಸಚಿವ

ಭಾನುವಾರ, 17 ಮೇ 2020 (19:20 IST)
ಕೋವಿಡ್ 19 ರ ಕಾರಣ ದೇಶದಲ್ಲಿ ವಿಧಿಸಿದ ಲಾಕ್ ಡೌನ್ ನಿಂದ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.

ಹೂವು   ಬೆಳೆ ನಷ್ಟಕ್ಕೆ ರೈತರಿಗೆ ತಾತ್ಕಾಲಿಕ ಪರಿಹಾರವಾಗಿ ಹಾಗೂ ಮುಂಬರುವ ದಿನಗಳಲ್ಲಿ ಹೂವು ಬೆಳೆಯನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಕ್ರಮವಾಗಿ ಹೆಕ್ಟೇರ್‌ಗೆ ಗರಿಷ್ಟ ರೂ. 25,000 ಪರಿಹಾರ ಸರ್ಕಾರ  ಘೋಷಿಸಿದೆ. ಧಾರವಾಡ ಜಿಲ್ಲೆಯ ಹೂವು ಬೆಳೆಗಾರರು ಇದರ ಪ್ರಯೋಜನ ಪಡೆಯಬೇಕು ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಹೂವು ಬೆಳೆಗಾರರಲ್ಲಿ ಮನವಿ ಮಾಡಿದ್ದಾರೆ.

ಅಲ್ಪಾವಧಿ ಹೂವು ಬೆಳೆಗಳಾದ ಚೆಂಡು ಹೂವು , ಸೇವಂತಿಗೆ , ಆಸ್ಕರ್  ಮತ್ತಿತರ ಹೂಗಳು ಹಾಗೂ ಬಹು ವಾರ್ಷಿಕ ಬೆಳೆಗಳಾದ ಕನಕಾಂಬರ , ಗುಲಾಬಿ , ಮಲ್ಲಿಗೆ , ಕಾಕಡ , ಬರ್ಡ್ ಆಫ್ ಪ್ಯಾರಡೈಸ್ , ಗ್ಲಾಡಿಯೋಲಸ್ ಇತ್ಯಾದಿ ಹೂವು ಬೆಳೆಗಳನ್ನು ಬೆಳೆದಿರುವ ರೈತರು ಇದರ ಪ್ರಯೋಜನ ಪಡೆಯಬಹುದು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ