ಡಿಸಿಎಂ ಲಕ್ಷ್ಮಣ ಸವದಿ ಆತ್ಮಹತ್ಯೆ ಮಾಡಿಕೊಳ್ಳೋದು ಬೇಡ ಅಂದೋರು ಯಾರು?

ಶನಿವಾರ, 5 ಅಕ್ಟೋಬರ್ 2019 (20:28 IST)
ಬೆಳೆಹಾನಿಯಿಂದ ರೈತರು ಕಂಗಾಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಏಕ ರೂಪದಲ್ಲಿ ಪರಿಹಾರ ನೀಡಬೇಕು. ಹೀಗಂತ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  

ಬೆಳಗಾವಿ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ಬೆಳೆ ಪರಿಹಾರವನ್ನು ಹೆಕ್ಟೇರ್ ಹೊರತುಪಡಿಸಿ ಎಕರೆ ರೂಪದಲ್ಲಿ ನೀಡಬೇಕು. ಈ ಮೊದಲು  ನಡೆದಿದ್ದ ಪ್ರತಿಭಟನೆಗಳ ಸಂದರ್ಭದಲ್ಲಿ ರೈತರ ಮೇಲೆ ದಾಖಲಿಸಿದ್ದ ಕೇಸ್ ಗಳನ್ನು ರದ್ದುಗೊಳಿಸುವಂತೆ ಒತ್ತಾಯ ಮಾಡಿದ್ರು.  

ನೆರೆ ಪರಿಹಾರದ ಚರ್ಚೆಗೆ  ಆಗಮಿಸಿದ್ದ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಎದುರಲ್ಲಿಯೇ ಡಿ.ಸಿ.ಎಂ ಲಕ್ಷ್ಮಣ ಸವದಿ ತಮಗೂ 80 ಲಕ್ಷ ನೆರೆ ಪರಿಹಾರ ಕೇಳಿದ್ದರು. ಅವರಿಗೆ ಸರಕಾರ  ಪರಿಹಾರ ನೀಡದಿದ್ದರೆ ಭಯ ಪಡಬೇಕಿಲ್ಲ. ರೈತರೆಲ್ಲರೂ ಸೇರಿ ಪರಿಹಾರ ನೀಡುತ್ತೇವೆ. ಹೀಗೆಂದು 180 ರೂಪಾಯಿ ಹಣ ಕೂಡಿಸಿ ಲಕ್ಷ್ಮಣ ಸವದಿ ಅವರಿಗೆ ಕಳಿಸಲು ರೈತರು ಮುಂದಾದರು.

ರೈತ ಮುಖಂಡ ಚುನಪ್ಪಾ ಪೂಜಾರಿ, ಬೆಳೆ ಪರಿಹಾರ ನೀಡುವಂತೆ ರೈತರು ಮುಖ್ಯಮಂತ್ರಿಗಳನ್ನು ಆಗ್ರಹಿಸಲು ಮುಂದಾದಾಗ ಪೊಲೀಸರು ಬಂಧಿಸಿದ್ದರು. ಪರಿಹಾರ ಸಿಗದಿದ್ದರೆ ಡಿಸಿಎಂ ಲಕ್ಷ್ಮಣ ಸವದಿ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಅಂತ ಟಾಂಗ್ ನೀಡಿದ್ರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ