ಮಾವಿನ ಹಣ್ಣಿನಿಂದ ಕೊರೊನಾ ಬರುತ್ತೆ ಎಂದ ಸಚಿವ
ಮಾವಿನ ಹಣ್ಣು ಮತ್ತು ಕೊರೊನಾ ಕುರಿತು ಸಚಿವರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗುತ್ತಿದೆ.
ಕೆ ಆರ್ ಪೇಟೆ ತಾಲೂಕಿನ ಮರುವನಹಳ್ಳಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಸುಮಾರು 14 ಜನ ಸೇರಿ ಅಲ್ಲಿ ಮೀಟಿಂಗ್ ಮಾಡಿದ್ದರು. ಈ ವೇಳೆ ಮಾವಿನ ಹಣ್ಣನ್ನು ಕಟ್ ಮಾಡಿ ಹಂಚಿಕೊಂಡು ತಿಂದಿದ್ದರು. ಇದರಿಂದಾಗಿ ಅವರೆಲ್ಲರಿಗೂ ಪರಸ್ಪರ ಸೋಂಕು ಹರಡಿರಬಹುದು ಎಂದು ಕ್ವಾರಂಟೈನ್ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದೆ ಅಷ್ಟೆ.
ಮಾವಿನ ಹಣ್ಣಿನಿಂದ ಕೊರೊನಾ ವೈರಸ್ ಬರಲ್ಲ. ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಚಿವ ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ.