ಶಿಕ್ಷಣ ಇಲಾಖೆಗೆ ಸಲಹೆಗಾರ ಯಾಕೆ ಎಂದಿದ್ದಕ್ಕೆ ಸಚಿವ ಜಿಟಿಡಿ ಹೇಳಿದ್ದೇನು ಗೊತ್ತಾ?
ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವರಿಗೆ ಉನ್ನತ ಶಿಕ್ಷಣ ಇಲಾಖೆಗೆ ಸಲಹೆಗಾರರಾಗಿ ಪ್ರೊ. ರಂಗಪ್ಪ ಅವರನ್ನು ನೇಮಿಸಿರುವ ಬಗ್ಗೆ ಸಮಜಾಯಿಷಿ ನೀಡಿದ್ದಾರೆ.
ನಾನು ಯಾರನ್ನೂ ಸಲಹೆಗಾರರಾಗಿ ಕೊಡಿ ಎಂದು ಕೇಳಿರಲಿಲ್ಲ. ಆದರೆ ಉನ್ನತ ಶಿಕ್ಷಣ ಇಲಾಖೆ ಎನ್ನುವುದು ಮಹತ್ವದ ಇಲಾಖೆ. ಇಲ್ಲಿ ಹಲವು ತಜ್ಞರ ಸಲಹೆಗಳು ಅಗತ್ಯ. ಯಾರೂ ಕೂಡಾ ಸಂಪೂರ್ಣವಾಗಿ ತಜ್ಞರಲ್ಲ. ಎಲ್ಲರ ಸಲಹೆ, ಸಹಕಾರದಿಂದಲೇ ಈ ಇಲಾಖೆ ನಡೆಸಲು ಸಾಧ್ಯ ಎಂದು ಜಿಟಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.