ಸಿಎಂ ಎಚ್ ಡಿಕೆ, ದೇವೇಗೌಡ ಸಂಧಾನ ಸಕ್ಸಸ್: ಕಚೇರಿಗೆ ಪ್ರವೇಶಿಸಲು ಒಪ್ಪಿಕೊಂಡ ಜಿಟಿಡಿ
ಶುಕ್ರವಾರ, 22 ಜೂನ್ 2018 (09:31 IST)
ಬೆಂಗಳೂರು: ಉನ್ನತ ಶಿಕ್ಷಣ ಖಾತೆ ಬೇಡವೆಂದು ಪಟ್ಟು ಹಿಡಿದು ಕೂತಿದ್ದ ಜಿಟಿ ದೇವೇಗೌಡರ ಮನ ಒಲಿಸಲು ಕೊನೆಗೂ ಸಿಎಂ ಎಚ್ ಡಿಕೆ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರು ಯಶಸ್ವಿಯಾಗಿದ್ದಾರೆ.
ನಿನ್ನೆ ಇಬ್ಬರೂ ವರಿಷ್ಠರು ಜಿಟಿಡಿ ಜತೆ ಮಾತುಕತೆ ನಡೆಸಿ ಅಧಿಕಾರ ಸ್ವೀಕರಿಸುವಂತೆ ಮನ ಒಲಿಸಿದರು. ಕಡಿಮೆ ಓದಿರುವ ತನಗೆ ಉನ್ನತ ಶಿಕ್ಷಣ ಇಲಾಖೆಯಂತಹ ಸಚಿವ ಸ್ಥಾನ ಬೇಡ. ಜನರಿಗೆ ಹತ್ತಿರವಾಗಿರುವಂತಹ ಬೇರೆ ಖಾತೆ ಕೊಡಿ ಎಂದು ಜಿಟಿಡಿ ಪಟ್ಟು ಹಿಡಿದಿದ್ದರು.
ಇದೇ ಕಾರಣಕ್ಕೆ ಅವರು ಇದುವರೆಗೆ ತಮ್ಮ ಕಚೇರಿಗೂ ಬಂದಿರಲಿಲ್ಲ, ಅಧಿಕಾರವನ್ನೂ ಸ್ವೀಕರಿಸಿರಲಿಲ್ಲ. ಕೊನೆಗೂ ಇದೀಗ ವರಿಷ್ಠರ ಸಂಧಾನದ ಬಳಿಕ ಇಂದು ವಿಧಾನಸೌಧದಲ್ಲಿರುವ ತಮ್ಮ ಕಚೇರಿ ಪ್ರವೇಶಿಸಲು ಮನಸ್ಸು ಮಾಡಿದ್ದಾರೆ. ಇಂದು ಪೂಜೆ ನೆರವೇರಿಸಿದ ಬಳಿಕ ಜಿಟಿ ದೇವೇಗೌಡ ಅಧಿಕೃತವಾಗಿ ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.