ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂಕಿ ಅಂಶ ಸಮೇತ ವಕ್ಫ್ ಬೋರ್ಡ್ ಮತ್ತು ಮುಸ್ಲಿಂ ಸಂಸ್ಥೆಗಳ ಅಧೀನದಲ್ಲಿರುವ ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ. 1973-74 ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 14,201 ಎಕರೆ ವಕ್ಫ್ ಬೋರ್ಡ್ ಹೆಸರಿನಲ್ಲಿ ನೋಟಿಫಿಕೇಷನ್ ಆಗಿದೆ ಎಂದಿದ್ದಾರೆ.
ಈಗಾಗಲೇ ಪ್ರತಿಪಕ್ಷಗಳು ವಿಜಯಪುರದಲ್ಲಿ 15 ಸಾವಿರ ಎಕರೆ ವಕ್ಫ್ ಬೋರ್ಡ್ ತನ್ನದು ಎಂದು ಹೇಳಿಕೊಳ್ಳುತ್ತಿದೆ ಎಂದಿತ್ತು. ಇದು ಹೆಚ್ಚು ಕಡಿಮೆ ನಿಜವಾಗಿದೆ. ಆದರೆ 14,201 ಎಕರೆ ಪೈಕಿ 700 ಎಕರೆ ಮಾತ್ರ ವಕ್ಫ್ ಬೋರ್ಡ್ ಸ್ವಾಧೀನದಲ್ಲಿದೆ. ಉಳಿದ ಆಸ್ತಿಗಳು ಕೆಲವು ಮುಸ್ಲಿಂ ಸಂಸ್ಥೆಗಳ ಕೈವಶದಲ್ಲಿವೆ. ಕೆಲವು ಆಸ್ತಿ ಈದ್ಗಾ, ಕೆಲವು ದರ್ಗಾ ಆಗಿವೆ. ಉಳಿದಂತೆ 1319 ಎಕರೆ ಯಾವುದೇ ವೈಯಕ್ತಿಕ ಅನುಭೋಗದಲ್ಲಿಲ್ಲ.
ಇವುಗಳನ್ನು ಇಂದೀಕರಣ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ಯಾರಿಗೂ ಸಮಸ್ಯೆಯಾಗುವುದಿಲ್ಲ. 11,835 ಎಕರೆ ಉಳುವವನೇ ಭೂಮಿಯ ಒಡೆಯ ಅಡಿಯಲ್ಲಿ ಮಂಜೂರಾಗಿದೆ. ಬೇರೆ ಬೇರೆ ಯೋಜನೆಗಾಗಿ ಭೂ ಸ್ವಾದೀನ ಮಾಡಲಾಗಿದೆ. ಇದು ಯಾವುದಕ್ಕೂ ನೋಟಿಸ್ ಕೊಟ್ಟಿಲ್ಲ.ರೈತರಿಗೆ ಮಂಜೂರಾದ ಜಮೀನಿಗೆ ಯಾವುದೇ ನೋಟಿಸ್ ನೀಡಲ್ಲ. ಆದರೆ 121 ನೋಟಿಸ್ ನೀಡಿರುವುದು ನಿಜ ಎಂದಿದ್ದಾರೆ.