ರಾಜ್ಯ ಸರ್ಕಾರದ ವಿರುದ್ದ ಕೆರಳಿ ಕೆಂಡವಾದ ಸಚಿವ ಕುಮಾರಸ್ವಾಮಿ ಪ್ರಶ್ನೆಗಳು ಹೀಗಿವೆ

Sampriya

ಶುಕ್ರವಾರ, 15 ನವೆಂಬರ್ 2024 (17:10 IST)
ಮೈಸೂರು: ಕೋವಿಡ್‌ ತನಿಖೆ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಅವರು ಕೆಂಪ್ಪಣ್ಣ ಆಯೋಗದ ವರದಿ ಇಟ್ಟುಕೊಂಡು ಇನ್ನೂ ಏನು ಮಾಡುತ್ತಿದ್ದಾರೆ. ನೈಸ್‌ ರಸ್ತೆ ಯೋಜನೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಅವರ ಸದನ ಸಮಿತಿಯೇ ವರದಿ ನೀಡಿದ್ದರೂ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

ತಾಲ್ಲೂಕಿನ ಕೇರ್ಗಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅತಂತ್ರಗೊಳ್ಳಲು ಇನ್ನೂ ಕಾಲವಿದೆ. ಮುಖ್ಯಮಂತ್ರಿಯವರು  ಯಾರಾದರೂ ಮುಟ್ಟಿದರೆ ಜನರು ದಂಗೆ ಏಳುತ್ತಾರೆಂದು ಹೇಳುತ್ತಾರೆ. ಇನ್ನೂ ದೇಶ ಲೂಟಿ ಮಾಡುತ್ತಿದ್ದರೂ,  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹87 ಕೋಟಿ ಹಗರಣ ನಡೆಸಿದವರನ್ನು ಜನರು ಆರಾಧಿಸುತ್ತಾರೆಯೇ ಎಂದು ಆಕ್ರೋಶ ಹೊರಹಾಕಿದರು.

ಕೇಂದ್ರ ಸರ್ಕಾರ ಇ.ಡಿ, ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸುವ ಇವರು ರಾಜ್ಯದ ಪೊಲೀಸ್ ಇಲಾಖೆಯನ್ನು ಯಾವ ಮಟ್ಟಕ್ಕಿಳಿಸಿದ್ದಾರೆಂದು ಗೊತ್ತು. ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವವರನ್ನು ಅರೆಸ್ಟ್ ಮಾಡಲಾಗುತ್ತಿದೆ. ನನ್ನ ಹಾಗೂ ನಿಖಿಲ್ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದರೂ ಇದುವರೆಗೂ ಒಂದು ಆರೋಪವನ್ನು ಸಾಬೀತು ಪಡಿಸಲು ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ