ಸರಕಾರಿ ಭೂಮಿ ನುಂಗಿದ್ರಾ ಸಚಿವ ಎಂ.ಕೃಷ್ಣಪ್ಪ.....?

ಗುರುವಾರ, 4 ಮೇ 2017 (18:28 IST)
ರಾಜ್ಯದ ವಸತಿ ಖಾತೆ ಸಚಿವ ಎಂ.ಕೃಷ್ಣಪ್ಪ ಸರಕಾರದ 350 ಕೋಟಿ ಮೌಲ್ಯದ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ ಎಂದು ಎನ್‌.ಆರ್.ರಮೇಶ್ ಆರೋಪಿಸಿದ್ದಾರೆ.  
 
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಕೃಷ್ಣಪ್ಪ ಸರಕಾರಿ ಭೂಮಿಯನ್ನು ಕಬಳಿಸಿ ಕಾನೂನುಬಾಹಿರವಾಗಿ ಖಾಸಗಿ ಲೇಔಟ್ ನಿರ್ಮಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. 
 
ಪ್ರತಿಷ್ಠಿತ ಸಾಫ್ಟ್‌ವೇರ್ ಸಂಸ್ಥೆಗಳಾದ ಅಸೆಂಚರ್, ಒರಾಕಲ್ ಕಂಪೆನಿಗಳ ಮುಂಭಾಗದಲ್ಲಿ ಖಾಸಗಿ ಲೇಔಟ್ ನಿರ್ಮಿಸುತ್ತಿದ್ದು, ಪ್ರತಿ ಚದುರ ಅಡಿಗೆ 18 ಸಾವಿರ ರೂಪಾಯಿಗಳ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
 
ಸರಕಾರಿ ಭೂಮಿಯಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದು, ನಿರ್ಗತಿಕ ರೈತರ ಹೆಸರಲ್ಲಿ ಸಚಿವ ಕೃಷ್ಣಪ್ಪ ಭೂಮಿಯನ್ನು ಕಬಳಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಎನ್‌.ಆರ್.ರಮೇಶ್ ಕುಮಾರ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ