ಸಚಿವ ಪ್ರಿಯಾಂಕ್ ರಾಜ್ಯದ ಹುಡುಗಾಟದ ಮಗು

ಮಂಗಳವಾರ, 24 ಅಕ್ಟೋಬರ್ 2023 (18:41 IST)
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕದ ವಿಶೇಷ ಹುಡುಗಾಟದ ಮಗು ಎಂದು ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಗೇಲಿ ಮಾಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಮೊದಲು ಗೆದ್ದಾಗ ಅವರಿಗೆ ಸಚಿವ ಸ್ಥಾನ ಕೊಡಲಾಯಿತು.

ಎರಡು ತಿಂಗಳ ನಂತರ ಐಟಿಬಿಟಿ ಖಾತೆಯನ್ನು ನೀಡಲಾಯಿತು. 2ನೇ ಬಾರಿ ಗೆದ್ದಾಗ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಕೊಡಲಾಯಿತು. 3ನೇ ಬಾರಿಗೆ ಗೆದ್ದಾಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್, ಐಟಿಬಿಟಿ ಖಾತೆ ಕೊಡಲಾಗಿದೆ. ಐಟಿಬಿಟಿ ಖಾತೆಯನ್ನು ಸಚಿವ ಎಂ.ಬಿ. ಪಾಟೀಲ್ ಅವರಿಂದ ಕಸಿದುಕೊಂಡಿದ್ದಾರೆ. ಅದಕ್ಕಾಗಿ ಅವರು ಕರ್ನಾಟಕದ ವಿಶೇಷ ಮಗು ಎಂದು ಲೇವಡಿ ಮಾಡಿದರು. ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಮತ್ತು ಅಫಜಲಪುರದ ಹಿರಿಯ ಶಾಸಕ ಎಂ.ವೈ.ಪಾಟೀಲ್ ಅವರನ್ನು ಎಡ ಮತ್ತು ಬಲ ಬದಿಯಲ್ಲಿ ತಾವು ಮಧ್ಯೆ ಕುಳಿತು ಸುದ್ದಿಗೋಷ್ಠಿ ಮಾಡುತ್ತಾರೆ. ಹೀಗಾಗಿ ಅವರು ವಿಶೇಷ ಮಗು ಎಂದು ಅವರು ಪರೋಕ್ಷವಾಗಿ ಜರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ