ವೀರಶೈವ ಸ್ವಾಮಿಜಿಗಳಿಗೆ ಸಚಿವ ಶರಣ್ ಪ್ರಕಾಶ್ ತಿರುಗೇಟು

jagadish kumbar

ಗುರುವಾರ, 22 ಮಾರ್ಚ್ 2018 (16:49 IST)
ಲಿಂಗಾಯತ ಸ್ವತಂತ್ರ ಧರ್ಮ ಶಿಫಾರಸ್ಸು ಮಾಡಲು ಕಾರಣರಾದ ಕಾಂಗ್ರೆಸ್‌ ಮುಖಂಡರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸತ್ತೇವೆ ಎಂಬ ವೀರಶೈವ ಸ್ವಾಮೀಜಿಗಳ ಎಚ್ಚರಿಕೆಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 
ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲಿಸುವುದು ಮತ್ತು ಗೆಲ್ಲಿಸುವುದು ಮತದಾರರ ಕೈಯಲ್ಲಿದೆ ಹೊರತು ಮಠಾಧೀಶರಿಂದ ಅಲ್ಲ. ಸ್ವಾಮೀಜಿಗಳು ಏನೇನು ಹೇಳಿಕೆ ನೀಡುತ್ತಾರೋ ನೀಡಲಿ, ಅವರ ಹೇಳಿಕೆಗೆ ನಾನು ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಅಂತಿಮವಾಗಿ ನಮ್ಮ ಭವಿಷ್ಯ ನಿರ್ಧರಿಸುವವರು ಮತದಾರ ಪ್ರಭುವೇ ಹೊರತು ಬೇರೆ ವ್ಯಕ್ತಿಗಳಲ್ಲ. 
 
ಸಮುದಾಯದ ಒಳಿತಿಗಾಗಿ ಲಿಂಗಾಯತ ಸ್ವತಂತ್ರ ಧರ್ಮ ಶಿಫಾರಸ್ಸು ಮಾಡಲಾಗಿದೆ. ಇದರಲ್ಲಿ ನಮ್ಮ ಸ್ವಾರ್ಥವಿಲ್ಲ, ಚುನಾವಣಾ ಗಿಮಿಕ್ಕೂ ಅಲ್ಲ ಎಂದು ಶರಣಪ್ರಕಾಶ ಪಾಟೀಲ್ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ