'ಸಚಿವ ಜಮೀರ್ ಗೆ ಲಾಕಪ್ ನಲ್ಲಿ ಹಾಕಿ ಒದಿಬೇಕು'

ಮಂಗಳವಾರ, 2 ಜುಲೈ 2019 (15:42 IST)
ಬಸ್ ಸ್ಟಾಂಡ್ ನಲ್ಲಿ ಪಿಕ್ ಪಾಕೇಟ್ ಮಾಡುವವರನ್ನ ಲಾಕಪ್ ನಲ್ಲಿ ಹಾಕಿ ಹೊಡೆದು ವಸೂಲಿ ಮಾಡ್ತಾರೆ. ಹಾಗೇ ಸಚಿವ ಜಮೀರ್ ಅವರನ್ನ  ಪೊಲೀಸರು ಲಾಕಪ್ ನಲ್ಲಿ ಹಾಕಿ ಒದ್ದರೆ ಸತ್ಯ ಹೊರ ಬರುತ್ತೆ. ಹೀಗಂತ ಬಿಜೆಪಿ ಮುಖಂಡ ಟಾಂಗ್ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದು, ಜಮೀರ್ ಅಹ್ಮದ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
IMA  ಪ್ರಕರಣದಲ್ಲಿ ಜಮೀರ್ ಇದ್ದಾರೆ ಎಂದು ಇಡಿ ಯವರು ನೋಟಿಸ್ ನೀಡಿದ್ದಾರೆ. ಎಲ್ಲಿ ಐಎಂಎ ಹಣ ಲೂಟಿ ಮಾಡಿ ಇಟ್ಟಿದ್ದೀರಿ ಅಂತ ಹೊರ ಹಾಕುತ್ತಾರೆ. ಎಸ್ ಐಟಿ ತನಿಖೆಯಿಂದ ಸತ್ಯ ಹೊರ ಬರಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ರು.  

ಕ್ಯಾಬಿನೆಟ್ ಯಿಂದ ಕೂಡಲೇ ಜಮೀರ್ ಅವರನ್ನ ಕೈ ಬಿಡಬೇಕು. ರಾಜ್ಯದ ಜನರ ನೇತಾರರಾಗಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜನರ ವಿರೋಧ ಎದುರಿಸುತ್ತಿದ್ದಾರೆ. ಇದನ್ನ ಗಂಭೀರವಾಗಿ ಪರಿಗಣಿಸಿ ಬಗೆಹರಿಸಬೇಕು ಎಂದ್ರು.  
ನಾವು ಮೈತ್ರಿ ಸರ್ಕಾರವನ್ನು ಕೆಡುವ ಪ್ರಶ್ನೆಯೇ ಇಲ್ಲ. ಅವರು ಅವರೇ ಬಡಿದಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತೇವೆ. ಒಂದು ವೇಳೆ ಮೈತ್ರಿ ಶಾಸಕರು ಪಕ್ಷಕ್ಕೆ ಬಂದರೆ ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಅಂತ ಹೇಳಿದ್ರು.

ಅಹಿಂದ ಮೂಲಕ ಬಹಳ ಬಾರಿ ಜನರಿಗೆ ಮೋಸ ಮಾಡಲು ಆಗಲ್ಲ. ಹೆಚ್.ವಿಶ್ವನಾಥ್, ಶ್ರೀನಿವಾಸ್ ಪ್ರಸಾದ್ ಸೇರಿ ಅನೇಕರಿಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ. ಇದೇ ಕಾರ್ಡ್ ಮತ್ತೆ ಮುಂದುವರೆಸಿದ್ದಾರೆ ಇದರಲ್ಲಿ ಸಫಲ ಆಗಲ್ಲ. ಹೀಗಂತ ಮಾಜಿ ಸಿಎಂ ಸಿದ್ದರಾಮಯ್ಯರಿಗೂ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ