ಸಚಿವರ ಎದುರಲ್ಲೇ ಆಯನೂರು-ಕಮಿಷನರ್ ಜಟಾಪಟಿ

ಮಂಗಳವಾರ, 11 ಜೂನ್ 2019 (14:30 IST)
ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ವೇಳೆ, ವಿಧಾನ ಪರಿಷತ್ ಸದಸ್ಯ ಹಾಗೂ ಮಹಾನಗರ ಪಾಲಿಕೆ ಆಯುಕ್ತರ ನಡುವೆ ಜಟಾಪಟಿ ನಡೆದಿದೆ.

ಆಯನೂರು ಮಂಜುನಾಥ್ ಮತ್ತು ಮಹಾನಗರ ಪಾಲಿಕೆ ಆಯಕ್ತರ ನಡುವೆ ಮಾತಿನ ಚಕಮಕಿ ನಡೆದಿದೆ.  ಶಿವಮೊಗ್ಗದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಶಾಸಕ ಕೆ.ಎಸ್. ಈಶ್ವರಪ್ಪ, ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡ್ತಾ ಇದ್ರು. 

ಈ ವೇಳೆ ಪಾಲಿಕೆ ಅಧಿಕಾರಿಗಳು ಮತ್ತು ಪಾಲಿಕೆ ಸದಸ್ಯರು ಕೂಡ ಉಪಸ್ಥಿತರಿದ್ರು.  ಈ ಸಂದರ್ಭದಲ್ಲಿ ಪಾಲಿಕೆಗೆ ಕಾಮಗಾರಿ ಬಗ್ಗೆ ಪ್ರಶ್ನೆ ಮಾಡಿದ ಆಯನೂರು ಮಂಜುನಾಥ್, ಏನ್ ಕೇಳಿದ್ರು ಆಗುತ್ತೆ ಅಂತಿಲ್ಲಮ್ಮಾ. 

ಇದು ಜನರ ನೋವು, ನೀವು ಜನರ ಸಮಸ್ಯೆ ಕೇಳುತ್ತಿಲ್ಲ.  ಜನರ ಸಮಸ್ಯೆ ನಿಮ್ಮ ಬಳಿ ಹೇಳಬಾರ್ದಾ...? ಜನರು ಸಾಯಬೇಕಾ....?  ನಿಮಗೆ ಮರ್ಯಾದೆ ಬೇಕು. ಜನರು ಸಾಯಬೇಕು.  ಇಲ್ಲಿ ಜನರ ಸಮಸ್ಯೆ ಕೇಳುವವರಿಲ್ಲಾ ಎಂದು ಆಯನೂರು ಮಂಜುನಾಥ್, ಆಯುಕ್ತರ ವಿರುದ್ಧ ಏರು ದನಿಯಲ್ಲಿ ಗದರಿದರು.  ನೀವು ಆಯುಕ್ತೆ ನಿನಗೆ ಹೇಗೆ ಹೇಳಬೇಕಮ್ಮ ಎಂದು ಜೋರಾಗಿ ಗದರಿದರು.  ಈ ವೇಳೆ, ಆಯನೂರು ಮಂಜುನಾಥ್ ಗೆ, ತಿರುಗೇಟು ನೀಡಿದ ಕಮಿಷನರ್ ಚಾರುಲತಾ, ಹೀಗೆ ಏಕವಚನದಲ್ಲಿ ಮಾತನಾಡಬಾರದು ನೀವು.  ಸರಿಯಾಗಿ ಮಾತನಾಡಿ, ನಾವು ನಿಮಗೆ ಗೌರವ ನೀಡುತ್ತಿಲ್ವಾ. ನಿಮ್ಮ ವಿರುದ್ಧ ಆಕ್ಷನ್ ತೆಗೋತಿನಿ ಎಂದ ಕಮಿಷನರ್ ಕೂಡ ಏರು ದನಿಯಲ್ಲಿಯೇ, ತಿರುಗೇಟು ಕೊಟ್ರು. 

ಇದಕ್ಕೆ ಆಕ್ರೋಶಗೊಂಡ ಆಯನೂರು ಮಂಜುನಾಥ್, ಆಯ್ತು ತಗೊ ಆ್ಯಕ್ಷನ್, ನಾನು ನೋಡ್ತಿನಿ, ಎಂದು ಗದರಿದರು.  ಈ ವೇಳೆ ಸ್ಥಳದಲ್ಲಿಯೇ ಇದ್ದ, ಸಚಿವ ಡಿ.ಸಿ. ತಮ್ಮಣ್ಣ, ಇಬ್ಬರನ್ನು ಸಮಾಧಾನ ಮಾಡಿದ್ರು.  ಈ ವೇಳೆ, ಶಾಸಕ ಈಶ್ವರಪ್ಪ ಮತ್ತು ಉಪಮೇಯರ್ ಚೆನ್ನಬಸಪ್ಪ ಸೇರಿದಂತೆ ಅನೇಕ ಅಧಿಕಾರಿಗಳು ಈ ಜಟಾಪಟಿಗೆ ಸಾಕ್ಷಿಯಾದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ