ಸಿದ್ದರಾಮಯ್ಯರ ಆಡಳಿತಾವಧಿಯಲ್ಲಿ ಅವ್ಯವಹಾರ : ಸುಧಾಕರ್
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 60 ವರ್ಷ ದೇಶವಾಳಿದ ಕಾಂಗ್ರೆಸ್ ಯಾವುದೇ ಯೋಜನೆ ಮಾಡಿದರೂ ಅದರಲ್ಲಿ ಭ್ರಷ್ಟಾಚಾರ ಇರುತ್ತದೆ. ಅವರಿಗೆ ಅದು ರಕ್ತಗತವಾಗಿ ಬಂದಿದೆ.
ಉಳಿದವರು ಕೂಡ ಹಾಗೆಯೇ ಎಂದು ಅಂದುಕೊಂಡು ಅತ್ಯುತ್ತಮ ಆಡಳಿತ ನೀಡುತ್ತಿರುವ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು.