ಮುಸ್ಲಿಂ ಯುವಕನೊಂದಿಗೆ ವಿವಾಹವಾಗಿ ನಾಪತ್ತೆಯಾದ ಮಗಳು ; ಪೋಷಕರು ಕಂಗಾಲು

ಮಂಗಳವಾರ, 19 ಡಿಸೆಂಬರ್ 2017 (12:36 IST)
Normal 0 false false false EN-US X-NONE X-NONE

ಶಿವಮೊಗ್ಗ: ಮುಸ್ಲಿಂ ಯುವಕನೊಬ್ಬನನ್ನು ವಿವಾಹವಾಗಿ ನಾಪತ್ತೆಯಾಗಿರುವ ಇಂಜಿನಿಯರಿಂಗ್ವಿದ್ಯಾರ್ಥಿನಿಯೊಬ್ಬಳ ಪೋಷಕರು ಜಿಲ್ಲೆಯ ಜಯನಗರ ಠಾಣೆಯಲ್ಲಿ ಲವ್ಜಿಹಾದ್ಪ್ರಕರಣವೊಂದು ದಾಖಲಿಸಿದ್ದಾರೆ.
 

ಅನುಷಾ ಹೆಗಡೆ ಎಂಬಾಕೆ  ಜಾವೀದ್ಖಾನ್ಎಂಬಾತನೊಂದಿಗೆ ಪೋಷಕರ ವಿರೋಧದ ನಡುವೆಯೂ ವಿವಾಹವಾಗಿದ್ದಳು. ಶಿವಮೊಗ್ಗ ಮೂಲದ ಸಂಗೀತ ವಿದ್ವಾನ್‌  ಅವರ  ಪುತ್ರಿ  ಆಗಿರುವ ಅನುಷಾ ಮೈಸೂರಿನಲ್ಲಿ ಇಂಜಿನಿಯರಿಂಗ್‌  ವ್ಯಾಸಂಗ ಮಾಡುತ್ತಿದ್ದ ವೇಳೆ ಜಾವೀದ್ ಹೆಣೆದ ಬಲೆಗೆ ಬಿದ್ದಿದ್ದಳು.

 

ಅನುಷಾ ಪೋಷಕರ ವಿರೋಧದ ನಡೆವೆಯೂ ಜಾವೀದ್ನನ್ನು ವಿವಾಹವಾಗಿದ್ದು, ಬಳಿಕ ಕೆಲ ದಿನಗಳ ಬಳಿಕ ಮನೆಗೆ ವಾಪಾಸಾಗಿ ತಾನು ಅನುಭವಿಸುತ್ತಿದ್ದ ಚಿತ್ರ ಹಿಂಸೆ ಬಗ್ಗೆ ಹೇಳಿಕೊಂಡಿದ್ದಾಳೆನನ್ನನ್ನು ಜಾವೀದ್ಗೃಹ ಬಂಧನದಲ್ಲಿರಿಸಿ ಹಿಂಸಿಸುತ್ತಿದ್ದಾನೆ ಎಂದು ನೋವು ತೋಡಿಕೊಂಡಿರುವುದಾಗಿ ಪೋಷಕರು ಪೊಲೀಸರ ಬಳಿ ದೂರು ಸಲ್ಲಿಸಿದ್ದಾರೆ.

 

ಇದೀಗ ಆಕೆ ಮತ್ತೆ ಜಾವೀದ್ನೊಂದಿಗೆ ಹೋಗಿದ್ದಾಳೆ. ಆತ ಆಕೆಯ ಬ್ರೈನ್ವಾಷ್ಮಾಡಿದ್ದಾನೆ. ಈಗಾಗಲೇ ಆತನಿಗೆ 2 ಮದುವೆಯಾಗಿದೆ ಎಂದು ಪೋಷಕರು ದೂರಿನಲ್ಲಿ ಹೇಳಿಕೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ