ಮಾಧ್ಯಮಗಳಿಂದ ವಿರಾಟ್-ಅನುಷ್ಕಾ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಅಂದ್ರು ಸಾನಿಯಾ ಮಿರ್ಜಾ

ಭಾನುವಾರ, 17 ಡಿಸೆಂಬರ್ 2017 (09:16 IST)
ಹೈದರಾಬಾದ್: ಮಾಧ್ಯಮಗಳು ಬೆಂಬಿಡುವುದನ್ನು ತಪ್ಪಿಸಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದೂರದ ಇಟೆಲಿಯಲ್ಲಿ ಮದುವೆಯಾದರೂ ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೇಳಿದ್ದಾರೆ.
 

ಸಾನಿಯಾ ವಿವಾಹ ಕೂಡಾ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಪಾಕಿಸ್ತಾನದಲ್ಲಿ ರಿಸೆಪ್ಷನ್ ನಡೆಸುವಾಗ ಅಂತೂ ನೂಕು ನುಗ್ಗಲೇ ಉಂಟಾಗಿತ್ತು. ಹೀಗಾಗಿ ತಮ್ಮ ಅನುಭವದ ಮಾತನ್ನು ಕೊಹ್ಲಿಗೂ ಹೇಳಿದ್ದಾರೆ ಸಾನಿಯಾ.

ಆದರೆ ಡಿಸೆಂಬರ್ 21 ರಂದು ಮುಂಬೈನಲ್ಲಿ ನಡೆಯಲಿರುವ ವಿರಾಟ್-ಅನುಷ್ಕಾ ರಿಸೆಪ್ಷನ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದು ಈಗಲೇ ಖಚಿತಪಡಿಸಲ್ಲ. ನಾನಾದ ದುಬೈನಲ್ಲಿರುತ್ತೇನೆ ಎಂದಿದ್ದಾರೆ ಖ್ಯಾತ ಟೆನಿಸ್ ತಾರೆ. ವಿರುಷ್ಕಾ ವಿವಾಹದ ಸುದ್ದಿ ತಿಳಿದ ತಕ್ಷಣ ಸಾನಿಯಾ ತಮ್ಮ ಟ್ವಿಟರ್ ಖಾತೆಯ ಮೂಲಕ ವಿಶ್ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ