HD ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಶಾಸಕ ಬಿವೈ ವಿಜಯೇಂದ್ರ
ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಇಂದು ಜೆಪಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಅವರ ಆರೋಗ್ಯ ವಿಚಾರಿಸಿದರು. ಕುಮಾರಸ್ವಾಮಿಗೆ ಮೈಲ್ಡ್ ಸ್ಟ್ರೋಕ್ ಆಗಿತ್ತು ಎಂದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದರು. ಅವರು ಆಸ್ಪತ್ರೆಯಲ್ಲಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಅಲ್ಲ್ಲಿಗೆ ತೆರಳಿ ಆರೋಗ್ಯ ವಿಚಾರಿಸಿ ಶುಭ ಹಾರೈಸಿದ್ದರು. ಕಾರಣಾಂತರಗಳಿಂದ ವಿಜಯೇಂದ್ರಗೆ ಆಸ್ಪತ್ರೆಗೆ ಹೋಗುವುದು ಸಾಧ್ಯವಾಗಿರಲಿಲ್ಲ.ಇನ್ನು ಕುಮಾರಸ್ವಾಮಿ ಅವರು ಚೇತರಿಸಿಕೊಂಡು ಮನೆಗ ಹೋದ ಮೇಲೆ ಭೇಟಿಯಾಗಿ ಮಾತಾಡಿಸುವುದು ಉತ್ತಮ ಪದ್ಧತಿ ಎಂದು ಇಂದು ಭೇಟಿಯಾಗಿದ್ದಾರೆಂದು ತಿಳಿಸಿದ್ದಾರೆ.