ರೈತರ ಕೆಲಸ ಮಾಡದ ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡ ಶಾಸಕ ಎಚ್‌ ಸಿ ಬಾಲಕೃಷ್ಣ

Sampriya

ಸೋಮವಾರ, 13 ಅಕ್ಟೋಬರ್ 2025 (19:18 IST)
Photo Credit X
ಮಾಗಡಿ: ರೈತರ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ನಿಮ್ಮ ಮುಖಕ್ಕೆ ಹೊಡಿತಿನಿ. ನಿಮ್ಮಿಂದ್ದಾಗಿ ನಮಗೆ ಬೈಗುಳ ಸಿಗುತ್ತಿದೆ. ನಿಮ್ಮ ಘನ ಕಾರ್ಯಕ್ಕೆ ಇಬ್ಬರನ್ನೂ ರಸ್ತೆಯಲ್ಲಿ ನಿಲ್ಲಿಸಿ ಹಾರ ಹಾಕಿ ಸನ್ಮಾನ ಮಾಡ್ತಿನಿ‌. ರೈತರ ವಿಷಯದಲ್ಲಿ ತಮಾಷೆ ಮಾಡುತ್ತಿದ್ದೀರಾ ಎಂದು ಶಾಸಕ ಎಚ್‌ ಸಿ ಬಾಲಕೃಷ್ಣ  ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ತಹಶೀಲ್ದಾರ್ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. 

ಪೋಡಿ ದುರಸ್ತಿಗೆ ಅರ್ಜಿ ಕೊಟ್ಟು ತಿಂಗಳುಗಳಾಗಿದ್ದರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತರೊಬ್ಬರು ಅಳಲು ತೋಡಿಕೊಂಡರು. 

ಆಗ ಪಕ್ಕದಲ್ಲಿದ್ದ ತಹಶೀಲ್ದಾರ್ ಶರತ್‌ ಕುಮಾರ್ ಅವರನ್ನು ಬಾಲಕೃಷ್ಣ ವಿಚಾರಿಸಿದಾಗ, ಅವರು ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಆನಂದಕುಮಾರ್ ಅವರತ್ತ ಬೆರಳು ತೋರಿಸಿದರು. ಅವರು ಮತ್ತೆ ತಹಶೀಲ್ದಾರ್‌ ಅವರತ್ತ ಮುಖ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ