ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಇಕ್ಬಾಲ್ ಅನ್ಸಾರಿ ಅವರ ಮೇಲೆ ಮಹಿಳೆಯರು ತಂಬಿಗೆ ಹಾಗೂ ಚಪ್ಪಲಿ ಎಸೆದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಗಂಗಾವತಿ ನಗರದಲ್ಲಿನ 28ನೇ ವಾರ್ಡಿಗೆ ಭೇಟಿ ನೀಡಿದಾಗ ಶಾಸಕ ಇಕ್ಬಾಲ್ ಅನ್ಸಾರಿ ಅವರಿಗೆ ಘೇರಾವ್ ಹಾಕಿದ್ದಾರೆ.ಸರಿಯಾದ ಶೌಚಾಲಯ ಇಲ್ಲವೆಂದು ಅನ್ಸಾರಿ ಭಾಷಣಕ್ಕೆ ತಂಬಿಗೆ ಹಿಡಿದುಕೊಂಡು ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ವಾಗ್ವಾದ ನಡೆದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಹಿಳೆಯರು ತಂಬಿಗೆ ಹಾಗೂ ಚಪ್ಪಲಿ ಎಸೆದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ನಡುವೆ ಕಾರ್ಯಕ್ರಮದಿಂದ ಶಾಸಕ ಅರ್ಧಕ್ಕೆ ಹೊರಟು ಹೋಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.