ಲಂಚ ಪಡೆದ ಪಂಚಾಯ್ತಿ ಸಿಬ್ಬಂದಿಗೆ ಶಾಸಕ ಕುಮಾರ ಬಂಗಾರಪ್ಪ ಕ್ಲಾಸ್

ಶನಿವಾರ, 21 ಜುಲೈ 2018 (20:50 IST)
ಲಂಚ ಪಡೆದ ತಾಲೂಕು ಪಂಚಾಯ್ತಿ ಸಿಬ್ಬಂದಿಗೆ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ತಮ್ಮದೇ ಮತಕ್ಷೇತ್ರದಲ್ಲಿ ನಡೆದ ಈ ಘಟನೆಗೆ ಅಚ್ಚರಿ ವ್ಯಕ್ತಪಡಿಸಿ ಪಂಚಾಯ್ತಿ ಸಿಬ್ಬಂದಿಗೆ ನೀರು ಇಳಿಸಿದ್ದಾರೆ. 

ಮಹಿಳೆಯಿಂದ ಲಂಚ ಪಡೆಯುತ್ತಿದ್ದಾಗ ತಾಲೂಕು ಪಂಚಾಯಿತಿ ಸಿಬ್ಬಂದಿ ಸಿಕ್ಕಿ ಬಿದ್ದಿದ್ದಾರೆ. ಸಿಕ್ಕಿ ಬಿದ್ದ ತಾಲೂಕು ಪಂಚಾಯ್ತಿ ಗುತ್ತಿಗೆ ಕೆಲಸಗಾರ ಮುಬಾರಕ್ ನನ್ನು ಅಮಾನತು ಮಾಡುವಂತೆ ತಹಶೀಲ್ದಾರ್ ಗೆ ಕುಮಾರ್ ಬಂಗಾರಪ್ಪ ಸೂಚನೆ ನೀಡಿದ್ದಾರೆ.

ಅಷ್ಟೇ ಅಲ್ಲ, ಮಹಿಳೆಗೆ ಹಣವನ್ನೂ ಸಹ ಶಾಸಕ ಕುಮಾರ ಬಂಗಾರಪ್ಪ ಮರಳಿ ಕೊಡಿಸಿದ್ದಾರೆ. ಅಂದಹಾಗೆ ಸೊರಬ ತಾಲೂಕು ಪಂಚಾಯಿತಿಯಲ್ಲಿ ಈ ಘಟನೆ ನಡೆದಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ