ಸರ್ಕಾರದ ವಿರುದ್ಧ ಶಾಸಕ ಮುನಿರತ್ನ ಧರಣಿ

ಬುಧವಾರ, 11 ಅಕ್ಟೋಬರ್ 2023 (13:07 IST)
ಇಂದು ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಇಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆವರೆಗೆ ಧರಣಿ ನಡರಸುತ್ತಿದ್ದಾರೆ.ಬಾಯಿಗೆ ಬಟ್ಟೆ ಕಟ್ಟಿಕೊಂಡು ಮಾತನಾಡದ ಮೌನ ಪ್ರತಿಭಟನೆಯನ್ನ ನಗರದ ವಿಕಾಸಸೌಧದ ಗಾಂಧಿ ಪ್ರತಿಮೆ ಬಳಿ ನಡೆಸಿದ್ದಾರೆ.
 
ಈ ಮೂಲಕ ಸರ್ಕಾರದ ಅನುದಾನ ತಾರತಮ್ಯದ ವಿರುದ್ದ ಹೋರಾಟವನ್ನ ನಡೆಸ್ತಿದ್ದಾರೆ.ಡಿಕೆಶಿ, ಡಿ.ಕೆ.ಸುರೇಶ್ ವಿರುದ್ಧ ಶಾಸಕ ಆಕ್ರೋಶ ಹೊರಹಾಕಿದ್ದಾರೆ.ಶಾಸಕ ಮುನಿರತ್ನ ಕ್ಷೇತ್ರದ ಅನುದಾನ ಸರ್ಕಾರ ವಾಪಸ್ ಪಡೆದಿದೆ.ಈಗಗಾಗಿ ಸರ್ಕಾರದ ವಿರುದ್ಧ ಮುನಿರತ್ನ ಹೋರಾಟಕ್ಕಿಳಿದಿದ್ದು,ಬಳಿಕ ಡಿಸಿಎಂ ಡಿಕೆಶಿ, ಸಂಸದ ಡಿಕೆ ಸುರೇಶ್ ರನ್ನ ಮುನಿರತ್ನ ಭೇಟಿ ಮಾಡಲಿದ್ದಾರೆ.
 
ಮುನಿರತ್ನ ಬೆಂಬಲಕ್ಕೆ  ಮಾಜಿ ಸಚಿವ ಅಶ್ವಥ್ ನಾರಾಯಣ ನಿಂತಿದ್ದು,ರಾಜರಾಜೇಶ್ವರಿ ನಗರ ಕ್ಷೇತ್ರದ ಅನುದಾನದಲ್ಲಿ ತಾರತಮ್ಯ ಆರೋಪ ಮಾಡಿದ್ದು, ಅನುದಾನ ಬಿಡುಗಡೆಗಾಗಿ ಶಾಸಕ ಮುನಿರತ್ನ ಧರಣಿ ನಡೆಸಿದ್ದಾರೆ.
 
ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಶಾಸಕ ಕುಳಿತಿದ್ದು,ರಾಜರಾಜೇಶ್ವರಿನಗರಕ್ಕೆ ಅನುದಾನ ಬಿಡುಗಡೆ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡ್ತಿದೆ.ಕ್ಷೇತ್ರಕ್ಕೆ ಅನ್ಯಾಯ ಆಗಿದೆ.ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಮುನಿರತ್ನ ಒತ್ತಾಯ ಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ