ಪಟ್ಟಿಯಲ್ಲಿ ಹೆಸರಿಲ್ಲದೇ ಇರುವುದನ್ನು ನೋಡಿ ಸಿಎಂ ಸಿದ್ದರಾಮಯ್ಯ ಮನೆಗೆ ಓಡಿದ ಶಾಸಕ ಎನ್ ಹ್ಯಾರಿಸ್!
ಸೋಮವಾರ, 16 ಏಪ್ರಿಲ್ 2018 (08:34 IST)
ಬೆಂಗಳೂರು: ಕಾಂಗ್ರೆಸ್ ಕೊನೆಗೂ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಅದರ ಜತೆಗೆ ಅಸಮಾಧಾನವೂ ಶುರುವಾಗಿದೆ.
ಒಟ್ಟು 224 ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಐದು ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲಾ ಕಡೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ. ಉಳಿದಂತೆ ಮೇಲುಕೋಟೆಯಲ್ಲಿ ರೈತನಾಯಕ ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ ನೀಡಿ ಅಭ್ಯರ್ಥಿ ಘೋಷಿಸುತ್ತಿಲ್ಲ.
ಆದರೆ ಅಭ್ಯರ್ಥಿಗಳ ಪಟ್ಟಿಯಲ್ಲಿ ತನ್ನ ಹೆಸರಿಲ್ಲದೇ ಇರುವುದಕ್ಕೆ ಶಾಂತಿ ನಗರ ಶಾಸಕ ಎನ್ ಹ್ಯಾರಿಸ್ ನಿನ್ನೆ ರಾತ್ರಿಯೇ ಸಿಎಂ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಪುತ್ರ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣದಿಂದಾಗಿ ಈ ಬಾರಿ ಹ್ಯಾರಿಸ್ ಗೆ ಟಿಕೆಟ್ ನೀಡಬಾರದು ಎಂದು ಪಕ್ಷದ ಕೆಲವು ನಾಯಕರೇ ವಿರೋಧ ವ್ಯಕ್ತಪಡಿಸಿದ್ದರು. ಅದರಂತೇ ಹ್ಯಾರಿಸ್ ಗೆ ಟಿಕೆಟ್ ನೀಡಲಾಗಿಲ್ಲ. ಆದರೆ ಅವರು ಪ್ರತಿನಿಧಿಸುವ ಶಾಂತಿ ನಗರ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಕಾಂಗ್ರೆಸ್ ಹೈಕಮಾಂಡ್ ಕುತೂಹಲ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.