ಅಶ್ಲೀಲ ವಿಡಿಯೋ ಹರಿಬಿಡುವುದಾಗಿ ಶಾಸಕ ಪ್ರಭು ಚವಾಣ್‌ಗೆ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ

Sampriya

ಬುಧವಾರ, 10 ಸೆಪ್ಟಂಬರ್ 2025 (15:55 IST)
ಔರಾದ್ (ಬೀದರ್ ಜಿಲ್ಲೆ): ಅಪರಿಚಿತ ವ್ಯಕ್ತಿಯೊಬ್ಬ ಕ್ಷೇತ್ರದ ಶಾಸಕ ಪ್ರಭು ಚವಾಣ್ ಅವರ ವಾಟ್ಸಪ್‌ಗೆ ಅಶ್ಲೀಲ ಚಿತ್ರ ಹಾಗೂ ವಿಡಿಯೋ ಕಳುಹಿಸಿ ₹30ಸಾವಿರಕ್ಕೆ ಬೇಡಿಕೆಯಿಟ್ಟ ಬಗ್ಗೆ ದೂರು ದಾಖಲಾಗಿದೆ. 

ಹಣ ಕೊಡದೆ ಇದ್ದರೆ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ತಾಲ್ಲೂಕಿನ ಹೊಕ್ರಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಶಾಸಕರ ಸಂಬಂಧಿ ಮುರಳಿಧರ ಪ್ರಕಾಶ ಪವಾರ್ ಎಂಬುವರು ನೀಡಿದ ದೂರಿನ ಅನ್ವಯ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸಿದ್ದಾರೆ.

ಅಪರಿಚಿತ ವ್ಯಕ್ತಿ ಶಾಸಕರ ವಾಟ್ಸಪ್‌ಗೆ ಸಂದೇಶ ಕಳುಹಿಸಿ ಸಾಹೇಬ್ರೆ ನನ್ನ ಮೇಲೆ ಭರವಸೆ ಇಟ್ಟು ನನಗೆ ₹30 ಸಾವಿರ ಹಣ ಹಾಕಿ ಸಹಾಯ ಮಾಡಿ. ಇಲ್ಲದೆ ಇದ್ದರೆ ಯೂಟ್ಯೂಬ್‌ನಲ್ಲಿ ನಿಮ್ಮ ವಿಡಿಯೊ ಶೇರ್ ಮಾಡುವೆ ಎಂದಿದ್ದಾನೆ.

ಸೆ. 7ರಂದು ರಾತ್ರಿ ತಂತ್ರಜ್ಞಾನದ ಸಹಾಯದಿಂದ ಹುಡುಗಿಯೊಬ್ಬಳ ಜತೆ ಶಾಸಕರಿರುವ ವಿಡಿಯೋವನ್ನು ಎಡಿಟ್ ಮಾಡಿ ಕಳುಹಿಸಿದ್ದಾನೆ. ಅದಲ್ಲದೆ ಪ್ರಿಯಾಂಕಾ ಗಾಂಧಿ ಹಾಗೂ ಶಾಸಕರ ಜತೆಗಿನ ಫೋಟೋವನ್ನು ಕಳುಹಿಸಿದ್ದಾನೆ. 

ಶಾಸಕರ ಹೆಸರು ಕೆಡಿಸಿ ಅವಮಾನ ಮಾಡುವ ಈ ಅಪರಿಚಿತ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ