ಕೈ ಶಾಸಕನ ರಾಜೀನಾಮೆ; ಸ್ಪೀಕರ್ ಮೇಲೆ ಪ್ರಭಾವ ಬೀರೋ ಪ್ರಶ್ನೆ ಇಲ್ವಂತೆ

ಗುರುವಾರ, 14 ಮಾರ್ಚ್ 2019 (13:24 IST)
ಚಿಂಚೋಳಿ ಶಾಸಕ ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರ ವಿಳಂಬವಾಗುತ್ತಿದೆ. ಆದರೆ ವಿಷಯದಲ್ಲಿ ಕಾಂಗ್ರೆಸ್  ಸ್ಪೀಕರ್ ಮೇಲೆ ಪ್ರಭಾವ ಬೀರೋ ಪ್ರಶ್ನೆಯೇ ಇಲ್ವಂತೆ.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೀಗಂತ ಹೇಳಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರಕ್ಕೂ ಕಾಂಗ್ರೆಸ್ ಗೂ ಸಂಬಂಧವೇ ಇಲ್ಲ. ಸ್ಪೀಕರ್ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವತಃ ಉಮೇಶ್ ಜಾಧವ್ ಅವರೇ ಸ್ಪೀಕರ್ ನ್ಯಾಯಾಧೀಶರಂತಿದ್ದಾರೆ. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ. ಹೀಗಿರಬೇಕಾದರೆ ಜಾಧವ್ ರಾಜೀನಾಮೆ ವಿಳಂಬದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎನ್ನುವ ಪ್ರಶ್ನೆಯಿಲ್ಲ. ಸ್ಪೀಕರ್ ಅವರ ಅನುಭವ, ಪ್ರಬುದ್ಧತೆ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ.

ಹಾಗೆ ಪ್ರಶ್ನೆ ಮಾಡುವ ವ್ಯಕ್ತಿತ್ವವೂ ಸ್ಪೀಕರ್ ಅವರದ್ದಲ್ಲ. ಸ್ಪೀಕರ್ ರಮೇಶ್ ಕುಮಾರ್ ನ್ಯಾಯಬದ್ಧವಾಗಿ ನಡೆದುಕೊಳ್ಳಲಿದ್ದಾರೆ. ಜಾಧವ್ ರಾಜೀನಾಮೆ ಸ್ವೀಕಾರ ವಿಳಂಬದ ಬಗೆಗೆ ನಮಗೆ ಗೊತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ