ಅಧಿವೇಶನ ಮರೆತು ಸಿನಿಮಾ ನೋಡಿದ ಶಾಸಕ!

ಬುಧವಾರ, 6 ಫೆಬ್ರವರಿ 2019 (20:02 IST)
ಇವತ್ತಿನ ಅಧಿವೇಶನ ಮಹತ್ವದಲ್ಲ. ಹೀಗಾಗಿ ಯುವಕರೊಂದಿಗೆ ಚಲನಚಿತ್ರ ನೋಡಲು ಬಂದಿದ್ದೇನೆ. ಹೀಗಂತ ಶಾಸಕರೊಬ್ಬರು ಹೇಳಿಕೊಂಡಿದ್ದಾರೆ.

ವಿಧಾನಸಭೆಯಲ್ಲಿ ನಾಳೆಯಿಂದ ಬಜೆಟ್ ಅಧಿವೇಶನವಿದೆ. ಅದು ಮಹತ್ವದ್ದು. ಹೀಗಾಗಿ ನಾನು ಇಂದು ಉರಿ ಚಿತ್ರ ನೋಡಲು ಬಂದಿದ್ದೇನೆ. ದೇಶ ಭಕ್ತಿ ಆಧಾರಿತ ಚಿತ್ರ ಉರಿ. ಈ ಚಿತ್ರ ನೋಡುವದರಿಂದ ಯುವಕರಲ್ಲಿ ದೇಶಭಕ್ತಿ ಹೆಚ್ಚಾಗುತ್ತದೆ. ಹೀಗಂತ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಜಯಪುರದಲ್ಲಿ ಯುವಕರೊಟ್ಟಿಗೆ ಉರಿ ಚಿತ್ರ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಮೂವರು ಶಾಸಕರು ಇಂದು ಅಧಿವೇಶನಕ್ಕೆ ಗೈರಾಗಿದ್ದಾರೆ ಎಂಬ ಮಾಹಿತಿ ಇದೆ. ಅವರು ಕೂಡಾ ನನ್ನ ಹಾಗೆ ಇಂತಹ ಒಳ್ಳೆಯ ಕಾರ್ಯದಲ್ಲಿ ಬ್ಯೂಜಿಯಾಗಿರಬಹುದು ಎಂದು ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ