ಕಾಂಗ್ರೆಸ್ ಗೆ ಬರ್ತೀರಾ ಎಂದು ಸಿದ್ದರಾಮಯ್ಯ ಕೇಳಿದ್ದಾರೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಿನ್ನೆ ಸದನದಲ್ಲಿ ಕಾಂಗ್ರೆಸ್ ನವರು ಧರಣಿ ಮಾಡ್ತಿದ್ದ ವೇಳೆ ನಾನು ಮರೆತು ಬಿಟ್ಟು ಹೋಗಿದ್ದ ನನ್ನ ಫೈಲ್ ತರಲು ಹೋಗಿದ್ದಾಗ ಸಿದ್ದರಾಮಯ್ಯ ಅವರು ಕರೆದು ಕಾಂಗ್ರೆಸ್ ಗೆ ಬರ್ತೀರಾ ಅಂತ ಕೇಳಿದ್ರು, ಆಗ ನಾನು ಸಿದ್ಧರಾಮಯ್ಯ ಅವರಿಗೆ ನನ್ನ ತಮ್ಮನನ್ನ ಕೇಳುತ್ತೇನೆ ಎಂದು ಹೇಳಿದ್ದೇನೆ ಎಂದರು.