ಶಾಸಕ ತಿಪ್ಪಾರೆಡ್ಡಿ ಹನಿಟ್ರ್ಯಾಪ್ಗೆ ಯತ್ನ..!
ಚಿತ್ರದುರ್ಗದ BJP ಶಾಸಕ J.H.ತಿಪ್ಪಾರೆಡ್ಡಿ ಅವರನ್ನು ಹನಿಟ್ರ್ಯಾಪ್ಗೆ ಬೀಳಿಸುವ ಯತ್ನ ನಡೆದಿದೆ. ವಿಡಿಯೋ ಕಾಲ್ ಮಾಡಿ ಶಾಸಕರನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಲಾಗಿದ್ದು, ತಕ್ಷಣ ಮೊಬೈಲ್ ಪಕ್ಕಕ್ಕೆ ಇಟ್ಟಿರುವುದಾಗಿ J.H. ತಿಪ್ಪಾರೆಡ್ಡಿ ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಚಿತ್ರದುರ್ಗ ಸೈಬರ್ ಠಾಣೆಗೆ BJP ಶಾಸಕ ತಿಪ್ಪಾರೆಡ್ಡಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೊದಲಿಗೆ BJP ಶಾಸಕ ತಿಪ್ಪಾರೆಡ್ಡಿ ಅವರಿಗೆ ವಿಡಿಯೋ ಕಾಲ್ ಒಂದು ಬಂದಿದೆ. ಅದನ್ನು ರಿಸೀವ್ ಮಾಡುತ್ತಿದ್ದಂತೆ ಅದರಲ್ಲಿ ಅಶ್ಲೀಲ ದೃಶ್ಯ ಕಂಡು ತಿಪ್ಪಾರೆಡ್ಡಿ ಅವರು ಮೊಬೈಲನ್ನು ಪಕ್ಕಕ್ಕೆ ಇಟ್ಟಿದ್ದಾರೆ. ಬಳಿಕ ಹನಿಟ್ರ್ಯಾಪ್ಗೆ ಯತ್ನಿಸಿದ್ದ ಕಿಡಿಗೇಡಿಗಳ ಕರೆ ಕಡಿತವಾದ ನಂತರ ಅಶ್ಲೀಲ ವಿಡಿಯೋ ವಾಟ್ಸಾಪ್ ಮಾಡಿದ್ದಾರೆ. ವಿಡಿಯೋ ವಾಟ್ಸಾಪ್ಗೆ ಬಂದದ್ದನ್ನು ಕಂಡು ತಿಪ್ಪಾರೆಡ್ಡಿ ಅವರು ತಮ್ಮವರಿಗೆ ಹೇಳಿ ವಿಡಿಯೋ ಕಾಲ್ ಮಾಡಿದ್ದ ನಂಬರ್ ಬ್ಲಾಕ್ ಮಾಡಿಸಿದ್ದಾರೆ. ಇದಾದ ಬಳಿಕ ಸೈಬರ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ತನಿಖೆ ವೇಳೆ ಈ ವಿಡಿಯೋ ಕಾಲ್ ರಾಜಸ್ಥಾನ, ಒಡಿಶಾದಿಂದ ಬಂದಿದೆ ಎಂಬ ಮಾಹಿತಿ ಸಿಕ್ಕಿದೆ. ತಿಪ್ಪಾರೆಡ್ಡಿ ಅವರಿಗೆ ವಿಡಿಯೋ ಕಾಲ್ ಮಾಡಿದ್ದ ಯುವತಿ ಖಾಸಗಿ ಭಾಗಗಳನ್ನು ತೋರಿಸಿದ್ದಳು. ತಕ್ಷಣವೇ ಮೊಬೈಲ್ ಪಕ್ಕಕ್ಕೆ ಇಟ್ಟಿರುವುದಾಗಿ J.H.ತಿಪ್ಪಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.