ಕೂರ್ಗ್ ವಿಲೇಜ್ ಹೋಂ ಸ್ಟೇಯಲ್ಲಿ ಮಾಡೆಲ್ ನಿಗೂಢ ಸಾವು; ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಕಾರಣ

ಸೋಮವಾರ, 17 ಜನವರಿ 2022 (19:31 IST)
ಹೋಂ ಸ್ಟೇಯಲ್ಲಿ ಮಾಡೆಲ್ ವಿಘ್ನೇಶ್ವರಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿ ಬಹಿರಂಗವಾಗಿದ್ದು, ಸಾವಿಗೆ ಕಾರಣ ತಿಳಿದುಬಂದಿದೆ.
ವಿಷಾನಿಲ ಸೇವನೆಯಿಂದಲೇ ಮಾಡೆಲ್ ವಿಘ್ನೇಶ್ವರಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಕಾರ್ಬನ್ ಮಾನಾಕ್ಸೈಡ್ ನಿಂದ ಯುವತಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
2021ರ ಅಕ್ಟೋಬರ್ 24ರಂದು ಮಾಡೆಲ್ ವಿಘ್ನೇಶ್ವರಿ, ಮಡಿಕೇರಿ ನಗರದ ಡೈರಿ ಫಾರ್ಮ್ ಬಳಿಯ ಕೂರ್ಗ್ ವಿಲೇಜ್ ಹೋಂ ಸ್ಟೇಯಲ್ಲಿ ಮೃತಪಟ್ಟಿದ್ದರು. 23 ವರ್ಷದ ವಿಘ್ನೇಶ್ವರಿ ಬಳ್ಳಾರಿ ಜಿಲ್ಲೆಯ ತೋರಣಗಲ್ ನಿವಾಸಿಯಾಗಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ