ಗಾಂಧಿ ಭಾವಚಿತ್ರ ತೆಗೆದು ದೊಡ್ಡ ತಪ್ಪು ಮಾಡಿದ್ದೀರಿ: ವೀರಪ್ಪ ಮೊಯ್ಲಿ

ಶನಿವಾರ, 14 ಜನವರಿ 2017 (12:35 IST)
ಕ್ಯಾಲೆಂಡರ್‌ನಿಂದ ಮಹಾತ್ಮಾ ಗಾಂಧಿ ಭಾವಚಿತ್ರ ತೆಗೆದು ಹಾಕಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭಾವನೆಗೆ ಧಕ್ಕೆಯಾಗಿದೆ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಗುಡುಗಿದ್ದಾರೆ. 
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಲೆಂಡರ್‌ನಿಂದ ಮಹಾತ್ಮಾ ಗಾಂಧಿ ಭಾವಚಿತ್ರ ತೆಗೆದು ಹಾಕಿರುವುದು ಸರಿಯಲ್ಲ. ಬೇಕಿದ್ದರೆ ಗಾಂಧೀಜಿ ಭಾವಚಿತ್ರದ ಜೊತೆಯೇ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾವಚಿತ್ರ ಹಾಕಿಕೊಳ್ಳಬಹುದಿತ್ತು. ಕ್ಯಾಲೆಂಡರ್‌ನಿಂದ ಗಾಂಧಿ ಭಾವಚಿತ್ರ ತೆಗೆದು ದೊಡ್ಡ ತಪ್ಪು ಮಾಡಿದ್ದೀರಿ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.
 
ಖಾದಿ ವಿಲೇಜ್ ಇಂಡಸ್ಟ್ರೀಸ್ ಕಮಿಷನ್ ಪ್ರಕಟಿಸಿರುವ 2017ನೇ ಸಾಲಿನ ಕ್ಯಾಲೆಂಡರ್ ಮತ್ತು ಡೈರಿಗಳಲ್ಲಿ ಚರಕ ನೂಲುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಚಿತ್ರದ ಬದಲು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಕಾಣಿಸಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ