ದೇಶದ ಆರ್ಥಿಕ ಕುಸಿತಕ್ಕೆ ಪ್ರಧಾನಿ ಮೋದಿಯೇ ಹೊಣೆ: ಖರ್ಗೆ

ಶನಿವಾರ, 10 ಡಿಸೆಂಬರ್ 2016 (15:56 IST)
ಏಕಾಏಕಿ 500, 1000 ಮುಖಬೆಲೆಯ ನೋಟ್ ಬ್ಯಾನ್ ಮಾಡಿದ ಹಿನ್ನೆಲೆಯಲ್ಲಿ ಎಟಿಎಂ ಕೇಂದ್ರಗಳ ಮುಂದೆ ಸರದಿ ಸಾಲಿನಲ್ಲಿ ನಿಂತ 150ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇವರ ಸಾವಿಗೆ ಯಾರು ಹೊಣೆ. ಕ್ಷಮೆ ಕೇಳುವುದರ ಹೊರತಾಗಿ ಪ್ರಧಾನಿ ಮೋದಿ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಮಾತು ಬರುತ್ತೆ ಅಂತಾ ಮಾತಿನಲ್ಲಿ ಮನೆ ಕಟ್ಟಲು ಹೊರಟರೆ ಯಾವುದೇ ಪ್ರಯೋಜನವಾಗಲ್ಲ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕಿಡಿ ಕಾರಿದರು. 
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನೋಟ್ ಬ್ಯಾನ್ ಮಾಡಿದ್ದು ಜನಸಾಮಾನ್ಯರ ಆಸ್ತಿ ಹಕ್ಕನ್ನು ಕಸಿದುಕೊಂಡಂತಾಗಿದೆ. ಇದು ದೇಶದ ಜನರಿಗೆ ತೊಂದರೆ ಕೊಡುವಂತಹ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಕಪ್ಪು ಹಣ ಹೊರತರುವುದರಲ್ಲಿ ನಮ್ಮ ಅಡ್ಡಿ ಇಲ್ಲ. ಆದರೆ, ಯಾವುದೇ ಆಲೋಚನೆ ಇಲ್ಲದೆ ಏಕಾಏಕಿ ನೋಟ್ ಬ್ಯಾನ್ ಮಾಡಿದ್ದು ಸರಿಯಲ್ಲ ಎಂದರು. 
 
ಪ್ರಧಾನಿ ನರೇದ್ರ ಮೋದಿ ಏನು ಆರ್ಥಿಕ ತಜ್ಞರಲ್ಲ. ನೋಟ್ ಬ್ಯಾನ್ ಮಾಡುವ ನಿರ್ಧಾರದ ಕುರಿತು ತಜ್ಞರನ್ನೂ ಸಹ ಕೇಳಿಲ್ಲ. ನೋಟ್ ಬ್ಯಾನ್‌ನಿಂದ ಉದ್ಯೋಗ, ಉದ್ಯಮ ಹಾಗೂ ಉತ್ಪನ್ನ ಕಡಿಮೆ ಆಗಿದ್ದಲ್ಲದೇ ದೇಶದ ಜಿಡಿಪಿ 7.1ಕ್ಕೆ ಇಳಿಕೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ