ಭ್ರಷ್ಟಾಚಾರಕ್ಕೆ ಮೋದಿ ಬೆಂಬಲ : ಸಿದ್ದರಾಮಯ್ಯ ವಾಗ್ದಾಳಿ

ಸೋಮವಾರ, 5 ಸೆಪ್ಟಂಬರ್ 2022 (08:19 IST)
ಹಾಸನ : ಇಂದು ಯಾವುದೇ ಸರ್ಕಾರಿ ಇಲಾಖೆಯ ಕಚೇರಿಗಳಿಗೆ ಹೋದರೂ ಲಂಚವಿಲ್ಲದೇ ಕೆಲಸ ನಡೆಯೋದಿಲ್ಲ.
 
ಹೀಗಿದ್ದೂ ಪ್ರಧಾನಿ ನರೇಂದ್ರ ಮೋದಿ ಅವರೇ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಅರಸೀಕೆರೆ ತಾಲ್ಲೂಕಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರೇ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ. ಕೆಂಪಣ್ಣ ಅವರು ಪತ್ರ ಬರೆದು ಒಂದು ವರ್ಷ ಆಯ್ತು. ಇವತ್ತಿನವರೆಗೂ ಪ್ರಧಾನಿ ಕ್ರಮ ತೆಗೆದುಕೊಂಡಿಲ್ಲ.

ಈ ಹಿಂದೆಯೂ ನಾ ಕಾವೂಂಗ್, ನಾ ಕಾನೇದೊಂಗಾ ಅಂತ ಪ್ರಧಾನಮಂತ್ರಿ ಹೇಳಿದ್ರು. ಅವರ ಹೇಳಿಕೆಯಂತೆ ಏನೂ ಕ್ರಮ ತೆಗೆದುಕೊಂಡಿಲ್ಲ. ಕರ್ನಾಟಕದಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ. ತಹಸೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಪಿಡಬ್ಲ್ಯೂಡಿ ಇಲಾಖೆ, ನೀರಾವರಿ ಇಲಾಖೆ ಯಾವ ಸರ್ಕಾರಿ ಕಚೇರಿಗಳಿಗೆ ಹೋದರೂ ಭ್ರಷ್ಟಾಚಾರವಿಲ್ಲದೇ ಏನೂ ಕೆಲಸ ನಡೆಯುವುದಿಲ್ಲ ಎಂದು ಆರೋಪಿಸಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಕ್ಕೆ ಸಂಧಿಸಿದಂತೆ `ಭ್ರಷ್ಟಾಚಾರ ನಡೆದಿದ್ದರೆ ಸಾಕ್ಷಿ ನೀಡಲಿ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ