ನಲಪಾಡ್ ಮತ್ತು ಗ್ಯಾಂಗ್ ಗೆ ಇಂದು ಮತ್ತೆ ಅಗ್ನಿ ಪರೀಕ್ಷೆ
ನಲಪಾಡ್ ಮತ್ತು ಸಹಚರರು ಜಾಮೀನಿಗಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಶುಕ್ರವಾರ ಇವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿರಲಿಲ್ಲ.
ಇಂದು ಮತ್ತೆ ವಿಚಾರಣೆ ನಡೆಯಲಿದ್ದು, ನಲಪಾಡ್ ಅಗ್ನಿ ಪರೀಕ್ಷೆ ಎದುರಿಸುವಂತಾಗಿದೆ. ತಾನು ಪ್ರಭಾವಿ ಮಗ ಎಂಬ ಹಮ್ಮಿನಲ್ಲಿ ಹಲ್ಲೆ ನಡೆಸಿದ್ದ ನಲಪಾಡ್ ಇಂದು ಹೊರಬರಲು ಹರಸಾಹಸ ಪಡುವಂತಾಗಿದೆ.